ಪಾಂಚಜನ್ಯ ಮಹಾ ರ‌್ಯಾಲಿ,ಭಾನುವಾರ ಮಲ್ಪೆಗೆ ಕೇಂದ್ರ ಸಚಿವೆ ಸ್ಮ್ರತಿ ಇರಾನಿ

ಮಲ್ಪೆ: ನಮೋ ಭಾರತ್ ಉಡುಪಿ ಆಯೋಜಿಸಿರುವ ‘ಪಾಂಚಜನ್ಯ’ ಮಹಾರ‌್ಯಾಲಿಯಲ್ಲಿ ಭಾಗವಹಿಸಲು ಕೇಂದ್ರಸರಕಾರದ ಪೈರ್ ಬ್ರಾಂಡ್ ಸಚಿವೆ ಸ್ಮ್ರತಿ ಇರಾನಿ ಭಾನುವಾರ ಮಲ್ಪೆಗೆ ಆಗಮಿಸಲಿದ್ದಾರೆ, ಮಲ್ಪೆಯ ಕಡಲ ತೀರದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿರುವ ಉಡುಪಿಯ ನಮೋಭಾರತ್ ತಂಡ ಜಿಲ್ಲೆಯ ವಿವಿಧ ಭಾಗಗಳಿಂದ ನಲವತ್ತು ಸಾವಿರಕ್ಕೂ ಮಿಕ್ಕಿ ಮೋದಿ ಅಭಿಮಾನಿಗಳು ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದೆ. ಅದೇ ದಿನ ಅಪರಾಹ್ನ ೩ಗಂಟೆಗೆ ಜೋಡುಕಟ್ಟೆಗೆ ನಾನಾ ಭಾಗದಿಂದ ಸೇರುವ ಐದು ಸಾವಿರಕ್ಕೂ ಮಿಕ್ಕಿ ಬೈಕುಗಳು ಬ್ರಹತ್ ರ‌್ಯಾಲಿಯೊಂದಿಗೆ ಮಲ್ಪೆ ಹುತಾತ್ಮ ಯೋಧ ಉಪೇಂದ್ರ ಕುಮಾರ್ ವೃತ್ತಕ್ಕೆ ಬಂದು ಸೇರಲಿದೆ. ನಂತರ ನಾಲ್ಕು ಘಂಟೆಗೆ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಸ್ಮ್ರತಿ ಇರಾನಿ ಹಾಗೂ ಸಿಡಿಗುಂಡಿನ ಭಾಷಣಕಾರ ಕಾರ್ಕಳ ಶ್ರೀಕಾಂತ್ ಶೆಟ್ಟಿ ಮಾತನಾಡಲಿದ್ದಾರೆ. ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಹಾಗೂ ಇತರೆ ಮುಖಂಡರು ಕೂಡ ಹಾಜರಿಲಿದ್ದಾರೆ ಎಂದು ಸಂಘಟನಕಾರರು ‘ನಿಮ್ಮ ಅಭಿಮತ, ಕ್ಕೆ ತಿಳಿಸಿದ್ದಾರೆ. ಈಗಾಗಲೇ ಪಾಂಚಜನ್ಯ ಮಹಾರ‌್ಯಾಲಿ ಬಗ್ಗೆ ಉಡುಪಿಯಾದ್ಯಂತ ಸಾರ್ವಜನಿಕ ವಲಯದಲ್ಲಿ ಭಾರೀ ಅಲೆ ಎದ್ದಿದ್ದು, ಕಾರ್ಯಕ್ರಮದ ಪ್ರೋಮೊಗಳು ಸಾಮಾಜಿಕ ಜಾಲಾತಾಣದಲ್ಲಿ ಸದ್ದು ಮಾಡುತ್ತಿವೆ.

ನಿಮ್ಮ ಅಭಿಮತ ನ್ಯೂಸ್ ಬ್ಯೂರೋ

Leave a Comment