ಒಳಹೊಕ್ಕಿ ನೋಡಿದರೆ ಸಾಲಿಗ್ರಾಮ ಪಟ್ಟಣಪಂಚಾಯತ್ ಇದು ಭ್ರಷ್ಟಾಚಾರದ ಬ್ರಹ್ಮಾಂಡ ಕೂಪ.!!

“ಸೋಮಯಾಜರೇ ಉಂಡಿದ್ದು ಸಾಕು ಮೇಲೇಳಿ! ಎನ್ನುವ ವರದಿ ನಿಮ್ಮ ಅಭಿಮತದಲ್ಲಿ ಪ್ರಕಟವಾದದ್ದೇ ತಡ ನುಂಗುಬಾಕ ಸೋಮಯಾಜಿ ಪರ ಬ್ಯಾಟಿಂಗು ಮಾಡಲು ಕೆಲವಷ್ಟು ಜನ ಓಡಿ ಬಂದಿದ್ದಾರೆ. ಇಂತಹ ಭ್ರಷ್ಟಾಚಾರಿಗಳನ್ನು ಸಮರ್ಥಿಸುವವರು ಇರುವ ತನಕ ದೇಶ ಖಂಡಿತವಾಗಿಯೂ ಉಧ್ದಾರವಾಗುವುದಿಲ್ಲ, ನೂರೈವತ್ತು ರೂಪಾಯಿಗೂ ಕೈ ಚಾಚುವ,ವಿದ್ಯಾರ್ಥಿಗಳನ್ನೂ ಬಿಡದೇ ವಸೂಲಿ ಮಾಡುವ ವಸೂಲಿ ಶೂರ ಶಿವಕುಮಾರನಿಗೂ ಹಾಗೂ ಮಾನಮರ್ಯಾದೆ ಬಿಟ್ಟ ಕೆಲ ಲಂಚಕೋರರಿಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ರೊಕ್ಕ ಬೆಳೆಯುವ ಮರವಾಗಿ ಮಾರ್ಪಾಟಾಗಿದೆ?? ಸದ್ಯ


ಸಾಲಿಗ್ರಾಮ ಪಟ್ಟಣ ಪಂಚಾಯತಿ ಒಳಗೆ ಭ್ರಷ್ಟಾಚಾರದ ಪೇಂಭೂತ ಕೇಕೆ ಹಾಕಿಕೊಂಡು ಕುಣಿಯುತ್ತಿದೆ, ಇದುವರೆಗೆ ಇಲ್ಲಿ ನಡೆದಿರುವ ಹಗರಣಗಳ ಪಟ್ಟಿ ಮಾಡುತ್ತಾ ಹೋದರೆ ನಿಮಗೆ ಭಯಾನಕ ವಿಶ್ವರೂಪವೊಂದರ ದರ್ಶನವಾಗಿ ಹೋಗಲಿದೆ..
ಕಾರಂತ ಬೀದಿಗೆ ಎಳೆದ ಹಳದಿ ಪಟ್ಟಿ ಇಂದ ಹಿಡಿದು, ಬಸ್‌ಸ್ಟ್ಯಾಂಡ್ ಪಕ್ಕದಲ್ಲಿ ಎದ್ದು ನಿಂತ ಸಾರ್ವಜನಿಕ ಶೌಚಾಲಯದ ತನಕ ಗೋಲ್‌ಮಾಲ್ ನಡೆದು ಹೋಗಿದೆ.. ಕಕ್ಕಸು ಮೇಲೆತ್ತುವ ಯಂತ್ರ ಖರೀದಿಯಲ್ಲೂ ಭಾರೀ ಅವ್ಯವಹಾರ ನಡೆದು ಹೋದುದರ ಬಗ್ಗೆ ಹಿಂದೊಮ್ಮೆ ಸುದ್ದಿಯಾಗಿತ್ತು,ಆ ಬೆನ್ನಲ್ಲೇ ಮೇಲೆಕ್ಕೆತ್ತಿದ ಕಕ್ಕಸು ಮಣ್ಣು ಕೂಡ ಸಾವಿರಾರು ರೂಪಾಯಿಗಳಿಗೆ ಲೇವಾದೇವಿಯಾಗುತ್ತಿದೆ.ಸಾಲಿಗ್ರಾಮ ಹೃದಯಭಾಗದಲ್ಲಿ ಉರಿಯುವ ಹೈಮಾಸ್ ವಿದ್ಯುತ್ ದೀಪದಲ್ಲೂ ಕೂಡ ರೊಕ್ಕ ತಿಂದು ತೇಗಲಾಗಿದೆ.
ಪಟ್ಟಣ ಪಂಚಾಯತ್ ಅಧೀನದಲ್ಲಿ ನಡೆದಿರುವ ಪ್ರತೀ ಕಾಮಗಾರಿಯಲ್ಲೂ ಲಕ್ಷಗಟ್ಟಲೇ ದುಡ್ಡು ಲೂಟಲಾಗಿದೆ.
ಪೂರ್ತಿ ಕಚೇರಿ ಒಳಗೆ ಸಿಸಿಟಿವಿ ಕಣ್ಗಾವಲಿದ್ದರೂ ಯಾವುದೇ ಅಂಜಿಕೆ ಇಲ್ಲದೇ ಒಳಗೆ ಸೋಮಯಾಜಿಯಂತಹ ಅದಿಕಾರಿಗಳು ದುಡ್ಡು ಬೇಡುತ್ತಾರೆ, ಹಣ ಹೊಡೆಯುವುದಕ್ಕಾಗಿಯೇ ಸರಕಾರಿ ಕೆಲಸಕ್ಕೆ ಸೇರಿದ್ದೇವೊ ಎನ್ನುವಂತೆ ಲಂಚಕೋರರು ಮಾನ ಬಿಟ್ಟವರಂತೆ ವರ್ತಿಸುತ್ತಿದ್ದಾರೆ.ಅನೇಕ ವರ್ಷಗಳಿಂದ ಇಲ್ಲಿನ ಟೆಂಡರ್ರುಗಳು ಕೆಲವೇ ಕೆಲವು ಗುತ್ತಿಗದಾರರ ಕೈ ಬದಲಾಗುತ್ತಾ ಬರುತ್ತಿದೆ.ಬ್ಲ್ಯಾಕ್ ಲೀಸ್ಟಿಗೆ ಸೇರಿದ ಗುತ್ತಿಗೆ ದಾರರೂ ಕೂಡ ಇಲ್ಲಿ ಟೆಂಡರ್ರು ಹಿಡಿದು ಹಣ ಮಾಡುವುದು ಸರ್ವೇಸಾಮಾನ್ಯ ವಾಗಿದೆ.
ಎಸಿಬಿ ಅದಿಕಾರಿಗಳು, ಜಿಲ್ಲಾದಿಕಾರಿಗಳು ಈ ಸಾಲಿಗ್ರಾಮ ಪಟ್ಟಣಪಂಚಾಯತ್‌ನತ್ತ ಗಮನಹರಿಸದೇ ಹೋದರೆ ಇಲ್ಲಿನ ಜನರನ್ನು ಭಗವಂತನೇ ಬಂದು ಕಾಪಾಡಬೇಕಿದೆ.

ನಿಮ್ಮ ಅಭಿಮತ
ನ್ಯೂಸ್ ಬ್ಯೂರೋ.

Leave a Comment