ಕೋಟ ಡಬಲ್ ಮರ್ಡರ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌!

ಆರೋಪಿಗಳಿಗೆ ಸಹಕರಿಸಿದ್ದ ಇಬ್ಬರು ಪೊಲೀಸರು ಅಂದರ್!

ಕೋಟ: ಜಿಲ್ಲೆಯನ್ನೇ ತಲ್ಲಣಗೊಳಿಸಿದ ಜೋಡಿ ಕೊಲೆಗೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್‌ ಸಿಬಂದಿಗಳು ಭಾಗಿಯಾಗಿದ್ದು, ಅವರು ಕೂಡ ಪೊಲೀಸರ ಅತಿಥಿಗಳಾಗಿದ್ದಾರೆ.

ಪವನ್ ಅಮಿನ್ ಎಪಿಸಿ 1432 ಮತ್ತು ವೀರೇಂದ್ರ ಆಚಾರ್ಯ ಎಪಿಸಿ 1423 ಈ ಇಬ್ಬರೂ ಪೋಲಿಸ್ ಸಿಬಂದಿಗಳು ಈ ಪ್ರಕರಣದಲ್ಲಿ ಆರೋಪಿಗಳಿಗೆ ಸಹಕಾರ ನೀಡಿದ ಹಿನ್ನೆಲೆ ಬಂಧಿಸಲಾಗಿದೆ.

ಇವರಿಬ್ಬರಿಗೂ ಹಲವು ವರ್ಷಗಳಿಂದ ರೆಡ್ಡಿಗಳ ಸಂಪರ್ಕವಿದ್ದು ಕೊಲೆಯಾದ ರಾತ್ರಿಯೇ ಈ ಪ್ರಕರಣದ ಹಂತಕರು ಆಶ್ರಯ ಪಡೆದದ್ದು ಹೆಬ್ರಿ ಕಚ್ಚೂರಿನ ಪವನ್ ಅಮಿನ್ ಮನೆಯಲ್ಲಿ! ಅದರ ಮರುದಿವಸ ಹರೀಶ್ ರೆಡ್ಡಿಗೆ ಮೊಬೈಲ್, ಸಿಮ್ ಮತ್ತು ಹಣದ ವ್ಯವಸ್ಥೆಯನ್ನ ಒಂದು ಕಾರಿನ ವ್ಯವಸ್ಥೆಯನ್ನ ಇನ್ನೊಬ್ಬ ಪೊಲೀಸ್ ಸಿಬಂದಿ ವೀರೇಂದ್ರ ಆಚಾರ್ಯ ಮೂಲಕ ಮಾಡಿದ ಪವನ್ ಅಮೀನ್ ಅದಕ್ಕೆ ಪ್ರಣವ್ ಭಟ್ ಎಂಬಾತನನ್ನ ಬಳಸಿಕೊಳ್ಳುತ್ತಾನೆ.

ತದನಂತರ ವೀರೇಂದ್ರ ಆಚಾರ್ಯನ ಜೊತೆ ಸೇರಿ ಆಗುಂಬೆ, ಎನ್.ಆರ್.ಪುರ, ಮಲ್ಲಂದೂರಿನ ತನ್ನ ಸಂಬಂಧಿಕರ ಮನೆಯಲ್ಲಿ ಹಂತಕರು ಉಳಿದುಕೊಳ್ಳಲು ವ್ಯವಸ್ಥೆಯನ್ನ ಮಾಡಿದ್ದ ಹಿನ್ನೆಲೆ ಈ ಮೂವರನ್ನು ನಿನ್ನೆ ರಾತ್ರಿ ಹಿರಿಯಡ್ಕ ಜೈಲಿಗೆ ಕಳುಹಿಸಲಾಗಿದೆ…

=ಅಭಿಮತ ನ್ಯೂಸ್ ರೂಮ್

Leave a Comment