ಪ್ರಥ್ವಿ ಪೂಜಾರಿ ನಿಗೂಢ ಸಾವು ಪ್ರಕರಣ ಆರೋಪಿ ಮಿಸ್ಪಾನ್ ಖುಲಾಸೆ!

ಅಭಿಮತ ಡೆಸ್ಕ್; ರಾಜ್ಯದಾದ್ಯಂತ ದೊಡ್ಡ ಮಟ್ಟದ ಸಂಚಲವನ್ನೇ ಸೃಷ್ಠಿಸಿದ್ದ ಬ್ರಹ್ಮಾವರದ ಕ್ರೀಡಾ ಪ್ರತಿಭೆ ಪ್ರಥ್ವಿ ಪೂಜಾರಿ ಅಂಪಾರು ಸಾವಿನ ಪ್ರಕರಣದ ಆರೋಪಿ ದೋಶಮುಕ್ತಿಯಾಗಿದೆ! ಎಂಟು ವರ್ಷದ ಹಿಂದೆ ಬ್ರಹ್ಮಾವರದ ಕಾಲೇಜಿನ ಹಾಸ್ಟೇಲಿನಲ್ಲಿ ಆತ್ಮಹತ್ಯೆಗೆ ಶರಾಣಾಗಿದ್ದಳು. ಆಗ ಆಕೆಗಿನ್ನೂ ಹದಿನೇಳು ವರ್ಷ ಪ್ರಾಯ. ಆಕೆ ರಾಷ್ಟ್ರೀಯ ಮಟ್ಟದ ಕ್ರೀಡಾ ಪ್ರತಿಭೆಯಾಗಿದ್ದಳು.

2012 ರ ಸೆಪ್ಟೆಂಬರ್ 27 ರಂದು ಪ್ರಥ್ವಿ ಆತ್ಮಹತ್ಯೆ ಮಾಡಿಕೊಂಡಿದ್ದಳು.ಪ್ರಥ್ವಿ ಶವದ ಬಳಿ ಸಾಂಧರ್ಭಿಕ ಸಾಕ್ಷಿಯಾಗಿ ದೊರಕಿದ ಡೆತ್ ನೋಟಿನಲ್ಲಿ ಬ್ರಹ್ಮಾವರದ ಆಕಾಶವಾಣಿ ಸಮೀಪದ ಮಿಸ್ಪಾನ್ ಎಂಬಾತನ ಹೆಸರು ಉಲ್ಲೆಖಿಸಿ ಪ್ರಥ್ವಿ ಪತ್ರವನ್ನ ಬರೆದಿರುತ್ತಾಳೆ. ಆತ ನನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದಾನೆ. ನನಗೆ ಬೇರೆ ಬೇರೆ ರೀತಿಯಲ್ಲಿ ಹಿಂಸೆಯನ್ನೂ ನಿಡುತ್ತಿದ್ದಾನೆ. ನನ್ನ ಸಾವಿಗೆ ಆತನೇ ಕಾರಣ ಎಂಬಂತೆ ಆಕೆ ಬರೆದಿದ್ದಳು ಎನ್ನಲಾಗಿತ್ತು. ಈ ಪ್ರಕರಣ ಬ್ರಹ್ಮಾವರ ಠಾಣೆಯಲ್ಲಿ ದಾಖಲಾಗಿತ್ತು. ಆ ಸಂದರ್ಭದಲ್ಲಿ ಕುಂದಾಪುರದ ಸಹಾಯಕ ಪೋಲೀಸ್ ಅಧೀಕ್ಷಕರಾಗಿದ್ದ ರಾಮ್ ನಿವಾಸ್ ಸೇಪಟ್ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಇಪ್ಪತ್ತ ನಾಲ್ಕು ಸಾಕ್ಷಿಗಳನ್ನ ವಿಚಾರಣೆ ನಡೆಸಿತ್ತು. ಎಲ್ಲಾ ಸಾಕ್ಷಿಗಳನ್ನೂ ವಿಚಾರಣೆ ನಡೆಸಿದ ನಂತರ ತೀರ್ಪು ಪ್ರಕಟಿಸಿದ ಜಿಲ್ಲಾ ನ್ಯಾಯಾಧೀಶ ಸಿ.ಎಂ. ಜೋಶಿಯವರು ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ಆರೋಪಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶ ನೀಡಿದರು. ಆರೋಪಿ ಪರ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ್ ವಾದಿಸಿದ್ದರು

Leave a Comment