ಪ್ರೇರಣಾ ನೈಕಂಬ್ಳಿ ಆರನೇ ವಾರ್ಷಿಕೋತ್ಸವ

ಆಡಂಬರ ಇಲ್ಲದೆ , ಸರಳತೆಯಿಂದ ಸಾಮಾಜಿಕವಾಗಿ ತೊಡಗಿಸಿಕೊಳ್ಳುತ್ತ ನಮ್ಮ ಈ ಗ್ರಾಮೀಣ ಭಾಗದ ಧ್ವನಿಯಾಗುವಲ್ಲಿ ಪ್ರೇರಣಾ ವೇದಿಕೆ ಕಾರ್ಯ ಶ್ಲಾಘನೀಯ ಎಂದು ಪ್ರೇರಣಾ ಯುವ ವೇದಿಕೆಯ ಆರನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ತಾಲೂಕು ಪಂಚಾಯತ್ ಸದಸ್ಯರಾದ ಉದಯ ಜಿ ಪೂಜಾರಿಯವರು ಶುಭ ಹಾರೈಸಿದರು .

ಮುಖ್ಯ ಉದ್ಘಾಟಕರಾಗಿ ಉಪಸ್ಥಿತರಿದ್ದ ಆಜ್ರಿ ಚೋನಮನೆ ಅಶೋಕ್ ಶೆಟ್ಟಿಯವರು ಧಾರ್ಮಿಕ , ವೈಜ್ಞಾನಿಕತೆಯ ಜೊತೆಗೆ ವೇದಿಕೆಯ ಉದ್ಧೇಶಗಳನ್ನು ಸಮಿಕರಿಸಿ ಶುಭ ಹಾರೈಸಿದರು .

ವೇದಿಕೆ ಅಧ್ಯಕ್ಷರಾದ ಉದಯ ಆಚಾರ್ಯರವರು ಪ್ರೇರಣಾ ಸಾಗಿಬಂದ ಸಾಧನೆಯ ಹಾದಿಯನ್ನು ಪ್ರಾಸ್ತಾವಿಕವಾಗಿ ತಿಳಿಸಿದರು.

ವೇದಿಕೆಯಲ್ಲಿ ನಮ್ಮೂರ ಹಿರಿಯರು ಮಹಾಬಲ ಶೆಟ್ಟಿ ದೇವಲ್ಕುಂದ , ಗುರುಭ್ಯೋ ನಮಃ ಅಂಗನವಾಡಿ ಕಾರ್ಯಕರ್ತೆಯಾದ ಶ್ರೀಮತಿ ನಾಗರತ್ನ , ರಾಜ್ಯಮಟ್ಟದ ಕ್ರೀಡಾ ಪ್ರತಿನಿಧಿಗಳಾದ ಪ್ರತಿಭಾ ಚೇತನ ಸ್ವಾತಿ , ಸಿಂಚನ , ರಾಜೇಶ ಇವರಿಗೆ ಪ್ರೇರಣಾ ಸಾಧಕ ಮಾಣಿಕ್ಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು .

ವಾರ್ಷಿಕೋತ್ಸವದ ಅಂಗವಾಗಿ ಪ್ರತಿವರ್ಷದಂತೆ ಅಗಲಿದ ಮಿತ್ರ ಸುರೇಶ ಸವಿನೆನಪಿನಲ್ಲಿ ವಂಡ್ಸೆ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಡಶಾಲಾ ಮಕ್ಕಳಿಗೆ ಆಯೋಜಿಸಿದ್ದ ಕೆಸರು ಗದ್ದೆ ಕ್ರೀಡೋತ್ಸವದಲ್ಲಿ ಹತ್ತಕ್ಕೂ ಹೆಚ್ಚು ಶಾಲೆಗಳು ಭಾಗವಹಿಸಿದ್ದವು . ಪ್ರಾಥಮಿಕ ವಿಭಾಗದಲ್ಲಿ ಆಲೂರು ಶಾಲೆ ಸತತ ಮೂರನೇ ವರ್ಷ ಪ್ರಥಮ ಪ್ರಶಸ್ತಿ , ಚಿತ್ತೂರು ಶಾಲೆ ದ್ವಿತೀಯ . ಪ್ರೌಡಶಾಲಾ ವಿಭಾಗದಲ್ಲಿ ಚಿತ್ತೂರು ಹೈಸ್ಕೂಲ್ ಪ್ರಥಮ , ಆಲೂರು ಹೈಸ್ಕೂಲ್ ದ್ವಿತಿಯ ಪ್ರಶಸ್ತಿ ಬಾಚಿಕೊಂಡವು. ಅದರ ಸಮಗ್ರ ಪ್ರಶಸ್ತಿ ಫಲಕವನ್ನು ನೀಡಲಾಯಿತು.

ವಾರ್ಷಿಕೋತ್ಸವ ದಿನ ಗ್ರಾಮ ಪಂಚಾಯತ್ ಚಿತ್ತೂರು , ಸಂತ ಅಲೋಷಿಯಸ್ ಕಾಲೇಜು ಮಂಗಳೂರು ಸಹಯೋಗದೊಂದಿಗೆ ಬೆಳಿಗ್ಗೆ ವರ್ಷಂಪ್ರತಿಯಂತೆ ಮಾರಣಕಟ್ಟೆಯಿಂದ ಚಿತ್ತೂರಿನ ತನಕ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಪತ್ರಕರ್ತರಾದ ವಸಂತ್ ಗಿಳಿಯಾರ್ , ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ ಮಡಿವಾಳ , ಉದ್ಯಮಿಗಳಾದ ರಾಜೀವ ಶೆಟ್ಟಿ ಬೆಟ್ಟಿನಮನೆ , ಗೋಪಾಲ್ ಶೆಟ್ಟಿ ಮುಲ್ಲಿಮನೆ , ಉಪಸ್ಥಿತರಿದ್ದರು . ಸಭಾ ಕಾರ್ಯಕ್ರಮದ ನಂತರ ಊರ ಪ್ರತಿಭಾವಂತರ ಸಾಂಸ್ಕ್ರತಿಕ ಕಲರವ ಹಾಗೂ ಪ್ರೇರಣಾ ಸದಸ್ಯರಿಂದ “ಗದಾಯುದ್ದ” ಯಕ್ಷಗಾನ ನಡೆಯಿತು . ವೇದಿಕೆಯ ಸಂಸ್ಥಾಪಕ ಸದಸ್ಯ ನಾಗರಾಜ್ ಶೆಟ್ಟಿ ನೈಕಂಬ್ಳಿ ಸ್ವಾಗತಿಸಿ, ನಾಗೇಂದ್ರ ಆಚಾರ್ಯ ಧನ್ಯವಾದ ತಿಳಿಸಿ , ದಿನೇಶ ಶೆಟ್ಟಿ ನಿರೂಪಿಸಿದರು .

Leave a Comment