ಪ್ರೇರಣಾ ನೈಕಂಬ್ಳಿ ನೂತನ ಪದಗ್ರಹಣ

ಪ್ರೇರಣಾ ಯುವ ವೇದಿಕೆ (ರಿ) ನೈಕಂಬ್ಳಿ ಚಿತ್ತೂರು ಇದರ ನಾಲ್ಕನೇ ಅವಧಿಗೆ ಅಧ್ಯಕ್ಷರಾಗಿ ರಾಘವೇಂದ್ರ ಶೆಟ್ಟಿ ಆಯ್ಕೆಯಾಗಿದ್ದಾರೆ .

ಉಪಾಧ್ಯಕ್ಷರಾಗಿ ಪ್ರತಾಪ ಶೆಟ್ಟಿ , ಖಜಾಂಚಿಯಾಗಿ ಅಣ್ಣಪ್ಪ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯಲ್ಲಿ ಅಶೋಕ ಕೊಡ್ಲಾಡಿ , ಉದಯ ಆಚಾರ್ಯ , ಚಂದ್ರ ಶೆಟ್ಟಿ , ದಿನೇಶ ಶೆಟ್ಟಿ , ನಾಗೇಂದ್ರ ಆಚಾರ್ಯ , ಮಂಜುನಾಥ ಪೂಜಾರಿ , ಅಕ್ಷಯ ಕುಮಾರ್ , ಸಂತೋಷ ಶೆಟ್ಟಿ , ಪ್ರಶಾಂತ ಶೆಟ್ಟಿ , ನೀಲ ಕುಮಾರ್ , ಹಾಗೂ ಇನ್ನು ಅನೇಕರು ಕಾರ್ಯ ಕಾರಿಣಿಯಲ್ಲಿದ್ದಾರೆ . ಒಟ್ಟು ಐವತ್ತಕ್ಕೂ ಹೆಚ್ಚು ಯುವ ಮನಸ್ಸುಗಳ ಟೀಮ್ ಪ್ರೇರಣಾದಲ್ಲಿ ಎಲ್ಲರೂ ಸಮಾನರು ಆದರು ನಮ್ಮಲ್ಲೆ ಒಬ್ಬರನ್ನು ಎರಡು ವರ್ಷಗಳ ಅವಧಿಗೆ ಅಧ್ಯಕ್ಷರನ್ನಾಗಿ ಹೊಸ ಕಾರ್ಯಕಾರಿಣಿ ಸಮಿತಿ ರಚನೆ ಮಾಡಿಕೊಂಡು ಒಗ್ಗಟ್ಟಿನಿಂದ ಸಾಗುತ್ತಿದ್ದೇವೆ ಎಂದು ಪ್ರೇರಣಾ ವೇದಿಕೆ ಸಂಸ್ಥಾಪಕ ಕಾರ್ಯದರ್ಶಿ ನಾಗರಾಜ್ ನೈಕಂಬ್ಳಿ ತಿಳಿಸಿದ್ದಾರೆ.

Leave a Comment