ವಂಡ್ಸೆ: ಚಿತ್ತೂರು ನೈಕಂಬ್ಳಿಯ ಪ್ರೇರಣಾ ಯುವ ವೇದಿಕೆಯ ಆರನೇ ವಾರ್ಷಿಕೋತ್ಸವದ ಅಂಗವಾಗಿ ವಂಡ್ಸೆ ಹೋಬಳಿ ಮಟ್ಟದ ಪ್ರೌಡಶಾಲೆ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಗೆ ಕೆಸರು ಗದ್ದೆ ಗ್ರಾಮೀಣ ಕ್ರೀಡಾಕೂಟ “ಆಟ ಕೆಸರಾಟ” ಜ.19ರ ಬೆಳಿಗ್ಗೆ ನೈಕಂಬ್ಳಿ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಆಯೋಜಿಸಲಾಗಿದೆ.

ಐದುನೂರಕ್ಕೂ ಹೆಚ್ಚು ಶಾಲಾ ಮಕ್ಕಳು , ಎಂಟು ವೈವಿಧ್ಯಮಯ ಕ್ರೀಡೆಗಳು , ಪ್ರತ್ಯೇಕ ಬಹುಮಾನಗಳು, ಸಮಗ್ರ ಪ್ರಶಸ್ತಿಗಳು , ಪ್ರಥಮ ಹಾಗೂ ದ್ವಿತೀಯ ಶಾಲೆಗಳು , ವಿಜೇತರಿಗೆ ನಗದು ಬಹುಮಾನಗಳು, ಶಾಶ್ವತ ಫಲಕಗಳು ಕೂಡ ಇರುತ್ತದೆ.

ಸವೆದು ಹೋಗುವ ಬದುಕಲ್ಲಿ ಸಾಗುವ ಸಮಾಜಕ್ಕೆ ಸಹಾಯಕವಾಗುವ ತುಡಿತದಿ ಹುಟ್ಟಿಕೊಂಡ ಈ ಸಂಘಕ್ಕೆ ಆರನೇ ವರ್ಷ ಪೂರ್ಣಗೊಂಡಿದ್ದು, ಇನ್ನೂ ನೂರಾರು ಯೋಚನೆ, ಯೋಜನೆಗಳು ಜಾರಿಗೊಳಿಸಲು ಇದೆ. ನಮ್ಮೇಲ್ಲರ ಯೋಜನೆಗಳು ಸಾಕಾರಗೊಳ್ಳುಲು ಎಲ್ಲರು ನಮ್ಮ ಜತೆಯಲ್ಲಿರಬೇಕು ಎಂದು ಸಂಘದ ಅಧ್ಯಕ್ಷರು ಮತ್ತು ಸವ್ ಸದಸ್ಯರು ವಿನಂತಿಸಿಕೊಂಡಿದ್ದಾರೆ.