ಕೋಟ: ಲೋಕ ಸಭಾ ಚುನಾವಣೆ ಹಿನ್ನೆಲೆ ರಾಜ್ಯದ ಒಟ್ಟು ೮೧ ಪೊಲೀಸರನ್ನು ವರ್ಗ ಮಾಡಿ ಸರಕಾರ ಆದೇಶೀಸಿದ್ದು, ಅದರಲ್ಲಿ ಕೋಟ ಠಾಣಾಧಿಕಾರಿಯಾಗಿದ್ದ ನರಸಿಂಹ ಶೆಟ್ಟಿ ಅವರನ್ನು ವರ್ಗ ಮಾಡಲಾಗಿದೆ. ಈಗ ಆ ಜಾಗಕ್ಕೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಠಾಣಾಧಿಕಾರಿಯಾಗಿದ್ದ ಆಗಿದ್ದ ರಫೀಿಕ್ ಎಂ ಅವರನ್ನು ನೇಮಕ ಮಾಡಲಾಗಿದೆ. ಕೋಟ ಠಾಣಾಧಿಕಾರಿಯಾಗಿರುವ ನರಸಿಂಹ ಶೆಟ್ಟಿ ಅವರನ್ನು ಉಡುಪಿ ನಗರ ಠಾಣೆ ೨ ಕ್ಕೆ ವರ್ಗಾಮಾಡಲಾಗಿದೆ.






ಈ ಹಿಂದೆ ಕೋಟ ಠಾಣಾಧಿಕಾರಿಯಾಗಿದ್ದ ಸಂತೋಷ್ ಕಾಯ್ಕಿಣಿ ವಿಧಾನಸಭಾ ಚುನಾವಣೆ ಹಿನ್ನೆಲೆ ಹೊನ್ನಾವರ ಠಾಣೆಗೆ ವರ್ಗಗೊಂಡಿದ್ದರು. ಈಗ ಪುನಃ ಉಡುಪಿ ಜಿಲ್ಲೆಗೆ ವಾಪಾಸಾಗಿರುವ ಅವರು ಹಿರಿಯಡ್ಕ ಠಾಣೆಗೆ ವರ್ಗಗೊಂಡಿದ್ದಾರೆ.
ಉಡುಪಿ ಜಿಲ್ಲೆಗೆ ವರ್ಗಗೊಂಡಿರುವ ಠಾಣಾಧಿಕಾರಿಗಳು
ಮಂಗಳೂರು ಪುಂಜಾಲಕಟ್ಟೆ ಠಾಣೆಯ ಪಿಎಸ್ಐ ಸೌಮ್ಯ ಅಮಾಸೆಬೈಲು ಠಾಣೆಗೆ, ಪುತ್ತೂರು ಮಹಿಳಾ ಠಾಣೆಯ ಪಿಎಸ್ಐ ಸೇಸಮ್ಮ ಉಡುಪಿ ಸಂಚಾರ ಠಾಣೆ ಪಿಎಸ್ಐ-೨, ಕಾಪು ಅಪರಾಧ ಪಿಎಸ್ಐ ಲಕ್ಷ್ಮಣ ಜಿ. ಉಡುಪಿ ನಗರ ಠಾಣೆ (ಅಪರಾಧ), ಉಡುಪಿ ಮಹಿಳಾ ಠಾಣಾ ಪಿಎಸ್ಐ ವೈಲೆಟ್ ಫೆಮಿನಾ ಕುಂದಾಪುರ ಸಂಚಾರ ಠಾಣೆ-೧, ಹಿರಿಯಡ್ಕ ಠಾಣೆ ಪಿಎಸ್ಐ ಸತೀಶ್ ಹೆಬ್ರಿ ಠಾಣೆಗೆ, ಕುಂದಾಪುರ ಠಾಣೆ ಅಪರಾಧ ಪಿಎಸ್ಐ ರಮೇಶ್ ಆರ್. ಪವಾರ್ ಕಾರ್ಕಳ ನಗರ ಠಾಣೆ (ಅಪರಾಧ), ಕಾರವಾರ ನಗರ ಠಾಣೆ ಪಿಎಸ್ಐ ನವೀನ್ ನಾಯ್ಕ ಕಾಪು ಠಾಣೆ, ಕುಮಟಾ ಠಾಣೆ ಪಿಎಸ್ಐ ಸುಧಾ ಕುಂದಾಪುರ ಠಾಣೆ (ಅಪರಾಧ), ಉ.ಕ. ಸಿದ್ದಾಪುರ ಠಾಣೆ ಪಿಎಸ್ಐ ನಿತ್ಯಾನಂದ ಗೌಡ ಉಡುಪಿ ಸಂಚಾರ ಠಾಣೆ, ಕಂಕನಾಡಿ ಠಾಣಾ (ಅಪರಾಧ) ಪಿಎಸ್ಐ ಜಾನಕಿ ಕಾಪು ಠಾಣೆ (ಅಪರಾಧ) ವಿಭಾಗಕ್ಕೆ ವರ್ಗಗೊಂಡಿದ್ದಾರೆ.
ನಿಮ್ಮ ಅಭಿಮತ ನ್ಯೂಸ್ ಬ್ಯೂರೋ.