ಪುತ್ತೂರು ಕಾಲೇಜು ಹುಡುಗಿಯ ಅತ್ಯಾಚಾರದ ಪ್ರಕರಣ; ಆರೋಪಿಗೆ ಜಾಮೀನು !

ಅಭಿಮತ ಡೆಸ್ಕ್ ಪುತ್ತೂರು; ಯುವತಿಯೋರ್ವಳನ್ನು ಸಾಮೂಹಿಕವಾಗಿ ಅತ್ಯಾಚಾರ ನಡೆಸಿ, ಅದರ ವಿಡಿಯೋ ಚಿತ್ರಿಕರಣ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಪ್ರಕರಣದಲ್ಲಿ ಜೊತೆಗೆ ದಲಿತ ದೌರ್ಜನ್ಯ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಪುತ್ತೂರಿನ ಕಾಲೇಜೊಂದರ ಐವರು ಯುವಕರ ಪೈಕಿ ಓರ್ವನಿ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣವಾದ ಪುತ್ತೂರಿನ ಪ್ರತಿಷ್ಠಿತ ಕಾಲೇಜು ವಿಧ್ಯಾರ್ಥಿನಿಯನ್ನು ನಶೆಯ ಅಮಲಿನಲ್ಲಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ ಪ್ರಕರಣ ದೇಶದಾಧ್ಯಂತ ವೈರಲ್ ಆಗಿತ್ತು. ಈ ಪ್ರಕರಣದಲ್ಲಿ ಬಜತ್ತೂರು ಗ್ರಾಮದ ಗುರುನಂದನ್, ಕಿಶನ್, ಸುನಿಲ್, ಮತ್ತು ಬಂಟ್ವಾಳದ ಪ್ರಖ್ಯಾತ್, ಪೆರ್ನೆಯ ಪ್ರಜ್ವಲ್ ಎಂಬ ಐದು ಯುವಕರನ್ನ ಆರೋಪದಡಿ ಬಂಧಿಸಲಾಗಿದ್ದು ಈ ಪೈಕಿ ಪ್ರಜ್ವಲ್ ಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಕಳೆದ ಮಾರ್ಚ್ ತಿಂಗಳಲ್ಲಿ ವಿಧ್ಯಾರ್ಥಿನಿಯನ್ನು ಮನೆಗೆ ಡ್ರಾಪ್ ನೀಡುವುದಾಗಿ ಕಾರಿನಲ್ಲಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಲಾಗಿತ್ತು. ಸಂತೃಸ್ತ ವಿಧ್ಯಾರ್ಥಿನಿ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದರು. ಈ ಪೈಕಿ ಐವರೂ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪುತ್ತೂರು ನ್ಯಾಯಾಲಯ ತಿರಸ್ಕರಿಸಿತ್ತು. ಆರೋಪಿ ನಂಬರ್ ಎರಡರ ಪ್ರಜ್ವಲ್ ಪರವಾಗಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದು ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದ್ದು ಮಿಕ್ಕ ನಾಲ್ವರು ನ್ಯಾಯಾಂಗ ಬಂಧನದಲ್ಲಿದ್ದಾರೆ

Leave a Comment