ನಿಜಾಮುದ್ದಿನ್‌ ಎಕ್ಸ್‌ಪ್ರೆಸ್‌ಗೆ ಬೆಂಕಿ: ಮಹಿಳೆಯಿಂದ ಪ್ರಯಾಣಿಕರ ರಕ್ಷಣೆ?

ಉಡುಪಿ: ಮುಂಬಯಿ ನಿಂದ ಎರ್ನಾಕುಲಂ ಗೆ ತೆರಳುತ್ತಿದ್ದ ರೈಲಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕೆಲ ಕಾಲ ಆತಂಕಕ್ಕೆ ಕಾರಣವಾಯಿತು.

ಉಡುಪಿ ಜಿಲ್ಲೆ ಬೈಂದೂರು ರೈಲ್ವೇ ನಿಲ್ದಾಣದಿಂದ ಸ್ವಲ್ಪವೇ ದೂರದಲ್ಲಿರುವ ಕಂಬದಕೋಣೆಯಲ್ಲಿ ನಿಜಾಮುದ್ದೀನ್ ಎಕ್ಸ್ ಪ್ರೆಸ್ (ಕ್ರಮಸಂಖ್ಯೆ 12618) ರೈಲು ಹೋಗುತ್ತಿತ್ತು ಹಾದು ಹೋಗುವಾಗ ರಾತ್ರಿ 1.30 ರ ಸುಮಾರಿಗೆ ರೈಲಿ ಬಿ-೪ ರೈಲಿನ ಎಸಿ ಕೋಚ್ ನಲ್ಲಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ರೈಲನ್ನು ಬಿಜೂರು ರೈಲ್ವೇ ಸ್ಟೇಷನ್‌ಗೆ ತಂದು ಅಲ್ಲಿ ಬೆಂಕಿ ನಂದಿಸುವ ಕೆಲಸವನ್ನು ಮಾಡಲಾಯಿತು.

ಅಪರಿಚಿತ ಮಹಿಳೆಯಿಂದ ಮಾಹಿತಿ

ಬೆಂಕಿ ಅವಘಡದ ಕುರಿತು ಕುಂದಾಪುರದಲ್ಲಿ ಇಳಿಯಬೇಕಾಗಿದ್ದ ಮಹಿಳೆ ತಕ್ಷಣ ಇತರ ಪ್ರಯಾಣಿಕರಿಗೆ ಎಚ್ಚರಿಸಿದರು ಎನ್ನಲಾಗಿದೆ. ಆದರೆ ರೈಲ್ವೇ ಇಲಾಖೆ ಈ ಕುರಿತು ಸರಿಯಾದ ಮಾಹಿತಿ ಇಲ್ಲ ಎನ್ನುತ್ತಿದೆ. ರೈಲ್ವೇ ಅಧಿಕಾರಿಗಳು ಹೇಳುವ ಪ್ರಕಾರ ಈ ಅವಘಡವೆನ್ನುವುದು ರೈಲಿನಲ್ಲಿರುವ ಟಿಟಿ ಮಾಹಿತಿ ಪ್ರಕಾರ ತಕ್ಷಣ ರೈಲನ್ನು ನಿಲ್ಲಿಸಿ ವಾಪಾಸು ಬಿಜೂರು ರೈಲ್ವೇ ನಿಲ್ದಾಣಕ್ಕೆ ತರಲಾಯಿತು. ಅಲ್ಲಿ ಅಗ್ನಿ ಶಮನ ಮಾಡಲಾಯಿತು ಎನ್ನಲಾಗಿದೆ.

ಸತತ ಮೂರು ಗಂಟೆಗಳ ಕಾರ್ಯಾಚರಣೆ ಮೂಲಕ ಬೆಂಕಿಯನ್ನು ನಂದಿಸಿ, ಆ ಬಳಿಕ ರೈಲಿನಲ್ಲಿರುವ ಬಿ೪ ಬೋಗಿಯನ್ನು ಬೆರ್ಪಡಿಸಿ ಬೆಳಗಿನ ಜಾವ ೫ ಗಂಟೆ ಸುಮಾರಿಗೆ ಮುಂದೆ ಕಳುಹಿಸಲಾಯಿತು.

ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ

ಈ ಬೆಂಕಿ ಅವಘಡದಲ್ಲಿ ಯಾರಿಗೂ ಯಾವುದೇ ಅಪಾಯ ಸಂಬವಿಸಿಲ್ಲ. ಮಹಿಳೆಯೋರ್ವರಿಗೆ ಘಟನೆಯಿಂದ ರಕ್ತದೊತ್ತಡ ಸಮಸ್ಯೆ ಕಂಡು ಬಂತು ಎನ್ನಲಾಗಿದ್ದು, ಆ ಬಳಿಕ ಪ್ರಯಾಣಿಕ ಮಹಿಳೆಗೆ ಚೆತರಿಕೆ ಕಂಡು ಅದೇ ರೈಲಿನಲ್ಲಿ ಮುಂದಿನ ಪ್ರಯಾಣ ಬೆಳೆಸಿದ್ದಾರೆ.

ಇತಿಹಾಸದಲ್ಲಿ ಮೊದಲ ಬಾರಿಗೆ ಘಟನೆ

ಕೊಂಕಣ ರೈಲ್ವೆ ಇತಿಹಾಸಲ್ಲಿ ಪ್ರಪ್ರಥಮ ಬಾರಿಗೆ ಈ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಬೆಂಕಿ ಅವಘಡಕ್ಕೆ ಶಾರ್ಟ್‌ ಸರ್ಕ್ಯೂಟ್‌ ಕಾರಣವೆನ್ನಲಾಗಿದ್ದು, ಈ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ರೈಲ್ವೇ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Leave a Comment