ಎಎಸ್ಪಿ ಕ್ರಷ್ಣಕಾಂತ್ ಅಬ್ಬರಕ್ಕೆ ಅಕ್ರಮ ಮರಳು ಮಾಫಿಯಾ ಚೆಲ್ಲಾಪಿಲ್ಲಿ: ಮೊಳಹಳ್ಳಿ ಅಕ್ರಮ ಮರಳು ಅಡ್ಡೆಗೆ ದಾಳಿ

ಎಎಸ್ಪಿ ಕೃಷ್ಣಕಾಂತ್ ನೇತೃತ್ವದ ತಂಡ ಮೊಳಹಳ್ಳಿಯ ಅಕ್ರಮ ಮರಳು ಅಡ್ಡೆಗಳಿಗೆ ದಾಳಿ ನಡೆಸಿದ್ದು ಮರಳು ದಂಧೆಯ ಭಾರೀ ಕುಳಗಳ ನಡುಮುರಿಯಲಾಗಿದೆ, ಉಡುಪಿ ಜಿಲ್ಲೆಯಲ್ಲಿ ಈ ಹಿಂದೆ ಎಸ್ಪಿಯಾಗಿ ಸದ್ದು ಮಾಡಿದ್ದ ಅಣ್ಣಾಮಲೈ ಕೂಡ ಹಿಂದೆ ಇದೇ ಕಾರ್ಕಳ ಭಾಗದಲ್ಲಿ ಎಎಸ್ಪಿಯಾಗಿ ಕಾರ್ಯನಿರ್ವಹಿಸಿ ಸಂಚಲನ ಮೂಡಿಸಿದ್ದರು,ಇದೀಗ ಅದೇ ಹಾದಿಯಲ್ಲಿ ನಡೆಯುತ್ತಿರುವಂತೆ ಕಾಣಿಸುತ್ತಿರುವ ಎಎಸ್ಪಿ ಕ್ರಷ್ಣಕಾಂತ್ ಜಿಲ್ಲೆಯ ಅಕ್ರಮಗಳ ಪಾಲಿಗೆ ಸಿಂಹಸ್ವಪ್ನವಾಗಿ ತೋರಿಬರುತ್ತಿದ್ದಾರೆ,ಮೊಳಹಳ್ಳಿ ಗ್ರಾಮ ಜಿಲ್ಲೆಯಲ್ಲೇ ಅತೀ ಹೆಚ್ಚು ಮರಳು ದಕ್ಕೆಗಳಿರುವ ಗ್ರಾಮವಾಗಿದ್ದು ಮರಳು ನಿಯಮ ಬಿಗಿಗೊಂಡ ನಂತರ ಈ ಭಾಗದಲ್ಲಿ ಅತೀ ಹೆಚ್ಚಿನ ಅಕ್ರಮ ಮರಳುಗಾರಿಕೆಯ ಅಡ್ಡೆಯಾಗಿ ಬದಲಾಗತೊಡಗಿತ್ತು , ಇದರ ಹಿಂದೇ ಭಾರಿ ಕುಳಗಳ ಕೈವಾಡ ಇರುವುದು ಗುಟ್ಟಾಗಿ ಉಳಿದಿರಲಿಲ್ಲ.. ದಾಳಿಯ ಮಾಹಿತಿ ಇನ್ನಷ್ಟೂ ಹೊರಬರಲಿದ್ದು ‘ನಿಮ್ಮ ಅಭಿಮತ ‘ಪೂರ್ಣ ಮಾಹಿತಿಯೊಂದಿಗೆ ಬರಲಿದೆ.

ನಿಮ್ಮ ಅಭಿಮತ ನ್ಯೂಸ್ ಬ್ಯೂರೋ.

Leave a Comment