ಹಗರಣದ ಸುಳಿಯಲ್ಲಿ ಸಾಸ್ತಾನ ಮೀನು ಮಾರುಕಟ್ಟೆ!

ಅವ್ಯವಸ್ಥೆಯ ಆಗರವಾದ ಸಾಸ್ತಾನ ಮೀನುಮಾರುಕಟ್ಟೆಯ ಕಾಮಗಾರಿಯಲ್ಲಿ ಗೋಲ್ ಮಾಲ್ ಯಾವ ಪರಿ ನಡೆದಿದೆ ಎಂದರೆ, ನೀಲ ನಕ್ಷೆಯಲ್ಲಿದ್ಯಾದಂತೆ ಯಾವುದೂ ಇಲ್ಲಿ ಸರಿಯಾಗಿ ನಡೆದಿಲ್ಲ. ಅತ್ಯಂತ ಕಳಪೆ ಗುಣಮಟ್ಟದ ಕಾಮಗಾರಿ ನಡೆಸಿ ಕೈತೊಳೆದುಕೊಳ್ಳಲಾಗುತ್ತಿದ್ದರೂ, ಸಂಬಂಧಪಟ್ಟ ಇಲಾಖೆಗಳು, ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳದೆ ದಿವ್ಯ ಮೌನ ವಹಿಸಿರುವುದು, ಅನುಮಾನ ಮೂಡಿಸುತ್ತಿದೆ. ಈ ಕುರಿತೊಂದು ಸವಿಸ್ತಾರ ವರದಿ ಇಲ್ಲಿದೆ ಓದಿಕೊಳ್ಳಿ

ಅಭಿಮತ; ಉಡುಪಿ ಜಿಲ್ಲೆಯಲ್ಲಿ ತಾಜಾ ಹೊಳೆ ಮೀನುಗಳಿಗೆ ಪ್ರಸಿದ್ದಿ ಪಡೆದ ಮೀನುಮಾರುಕಟ್ಟೆ ಎಂದರೆ ಅದು ಸಾಸ್ತಾನ ಮೀನುಮಾರುಕಟ್ಟೆ. ದೂರದ ಊರುಗಳಿಂದ ಹಸಿಮೀನುಪ್ರಿಯರು ಸಾಸ್ತಾನದ ತನಕ ಬಂದು ಹಸಿ ಹಸಿ ಹೊಳೆಮೀನು ಖರೀದಿಸಿ ಹೋಗುತ್ತಾರೆ, ಕೇವಲ ಹೊಳೆ ಮೀನಷ್ಟೇ ಅಲ್ಲದೆ ಸಮುದ್ರದ ವಿವಿಧ ಜಾತಿಯ ಮೀನುಗಳು ಹಾಗೂಒಣಮೀನು ವ್ಯಾಪಾರವೂ ಇಲ್ಲಿ ಬಲು ಜೋರಾಗಿಯೇ ಉಂಟು., ಐರೋಡಿ ಪಂಚಾಯತ್ ವ್ಯಾಪ್ತಿಗೆ ಬರುವ ಈಮೀನು ಮಾರುಕಟ್ಟೆಯನ್ನು ಹೈಟೆಕ್ ಮೀನು ಮಾರುಕಟ್ಟೆಯನ್ನಾಗಿಸಲು ಮೂರು ವರುಷದ ಹಿಂದೆ ಎರಡುಕೋಟಿಯಷ್ಟು ದೊಡ್ಡ ಮೊತ್ತ ಮಂಜೂರಾಗಿತ್ತು, 2016 ರ ಇಸವಿಯಲ್ಲಿ ಆರಂಭಗೊಂಡ ಕಾಮಗಾರಿ ಕುಂಟುತ್ತಾ ಸಾಗಿಕೊನೆಗೆ ತೆವಳಿ ತೆವಳಿ ಇದೀಗ ಅಂತಿಮ ಹಂತಕ್ಕೇನೋಬಂದು ನಿಂತಿದೆ.. ಸುಣ್ಣ ಬಣ್ಣದ ಲೆವೆಲ್ಲಿಗೆ ಬಂದು ನಿಂತ ಈಮೀನುಮಾರುಕಟ್ಟೆಯ ಒಳಹೊಕ್ಕು ನೋಡಿದರೆ ಎರಡುಕೋಟಿಯಷ್ಟು ದೊಡ್ಡ ಮೊತ್ತದಲ್ಲಿ ಅರ್ಧಕ್ಕರ್ಧ ದುಡ್ಡು ಗುಳುಂ ಸ್ವಾಹ ಆದ ದಟ್ಟ ಸಾದ್ಯತೆಗಳೇ ವಿಶ್ವಪ್ರಸಿದ್ದ ಮೀನುಮಾರ್ಕೇಟಿನ ದಶದಿಕ್ಕುಗಳಿಂದಲೂ ಎದ್ದು ಕಾಣಿಸುತ್ತಿದೆ.!!

 ಹತ್ತು ತಿಂಗಳಲ್ಲಿ ಮುಗಿಯಬೇಕಾದ ಕಾಮಗಾರಿಗೆ ನಾಲ್ಕುವರ್ಷ

ರಾಷ್ಟ್ರೀಯ ಮೀನುಗಾರಿಕಾ ಮಂಡಳಿ ಹೈದರಾಬಾದಿನ ಒಂದು ಕೋಟಿ ಅನುದಾನ ಹಾಗೂ ನಬಾರ್ಡಿನ 95 ಲಕ್ಷರೂಪಾಯಿ ಸಾಲ ಹಾಗೂ ರಾಜ್ಯ ಸರಕಾರದ ಐದು ಲಕ್ಷರೂಪಾಯಿಗಳ ಅನುದಾನವನ್ನು ಸೇರಿಸಿ ಒಟ್ಟು ಎರಡುಕೋಟಿ ರೂಪಾಯಿ ಮೊತ್ತದಲ್ಲಿ ಮೂರು ವರುಷದ ಹಿಂದೆ ಆರಂಭಗೊಂಡ ಕಾಮಗಾರಿ ಕೇವಲ ಹತ್ತು ತಿಂಗಳಲ್ಲಿಮುಗಿಸಬೇಕೆಂಬ ಕರಾರಿದ್ದರೂ  ನಾನಾ ನೆಪವೊಡ್ಡಿ  ಮೂರುವರುಷದ ತನಕ ಕುಂಟುತ್ತಾ ಸಾಗಿ ಬಂತು ಈ ಮೀನುಮಾರುಕಟ್ಟೆ, ಮಾರ್ಕೇಟಿನ

ಕಾಮಗಾರಿ ವಹಿಸಿ ಕೊಂಡ ‘ಉಡುಪಿ ನಿರ್ಮಿತಿ ಕೇಂದ್ರ, ಸಾಸ್ತಾನದ ಸುರೇಶ್ ಶೆಟ್ಟಿ ಎನ್ನುವ ಗುತ್ತಿಗೆದಾರನಿಗೆ ಇದರತುಂಡು ಗುತ್ತಿಗೆಯನ್ನು ನೀಡಿತು, 

ಅದರ ಗುತ್ತಿಗೆ ಕರಾರಿನಲ್ಲಿ ಇರುವ ಬಾವಿ, ಅಂಡರ್ ಗ್ರೌಂಡಟ್ಯಾಂಕ್, ಸೆಪ್ಟಿಕ್ ಟ್ಯಾಂಕ್, ಕೊಳಚೆ ನೀರಿನ ಶುದ್ದೀಕರಣಘಟಕ, ಗಳ್ಯಾವುದೂ ಸದ್ಯಕ್ಕಿಲ್ಲಿ ನಿರ್ಮಿಸಿದ ಕುರುಹುಕಾಣಿಸುತ್ತಿಲ್ಲ, ಮೀನು ಶೀತಲಿಕರಣ ಘಟಕದ (500 ಕೆಜಿಸಾಮರ್ಥ್ಯ) ನಿರ್ಮಾಣ ಮಾಡಬೇಕಾದ ಕಡೆ ಒಂದು ಸಣ್ಣ ಎಸಿ ಅಳವಡಿಸಲಾಗಿದೆ, 

ಎರಡು ಕೋಟಿಯಷ್ಟು ದುಡ್ಡು ನುಂಗಿ ನೀರು ಕುಡಿಯಲೆಂದೇ ಮೀನು ಮಾರುಕಟ್ಟೆಯ ಕಾಮಗಾರಿ ನಡೆಸಿದ ಹಾಗೇ ಕಾಣಿಸುತ್ತಿದ್ದು, ಕೊಳಚೆ ನೀರು ಹರಿಯಲು ಬೇಕಾದಮೋರಿಯಾಗಲಿ, ಮತ್ತೊಂದಾಗಲಿ ಇಲ್ಲಿ ಕಾಣಿಸುತ್ತಿಲ್ಲ, 

ಮೀನುಗಾರಿಕಾ ಇಲಾಖೆ ದುಡ್ಡು, ಐರೋಡಿ ಪಂಚಾಯತ್ ಯಜಮಾನಿಕೆ

ನೂತನ ಮಾರುಕಟ್ಟೆಯ ಒಳನೋಟ

ಸರಕಾರದ ಸುಪರ್ದಿಯ ಜಾಗದಲ್ಲಿ ಇದ್ದ ಮೀನು ಮಾರ್ಕೇಟಿನ ಆಡಳಿತ ನಿರ್ವಹಣೆಯನ್ನು ಇದುವರೆಗೆ ಐರೋಡಿ ಪಂಚಾಯತ್ ನಿರ್ವಹಿಸುತ್ತಿತ್ತು, ಹದಿನಾಲ್ಕು ಅಂಗಡಿ ಕೋಣೆ ಸಹಿತವಿದ್ದ ಮೀನುಮಾರುಕಟ್ಟೆಯನ್ನು ಏಲಂ ಮಾಡಿ ಒಂದಷ್ಟು ಆದಾಯ ಗಳಿಸಿದರೂ ಗಬ್ಬೆದ್ದುನಾರುತ್ತಿದ್ದ ಮೀನುಮಾರ್ಕೇಟಿನ ಸರಿಯಾದ ನಿರ್ವಹಣೆಮಾಡದೇ ಇದ್ದ ಐರೋಡಿ ಪಂಚಾಯತ್, ಹರಾಜದ ದುಡ್ಡಿಗಿಂತ ಕಡಿಮೆ ದುಡ್ಡಿಗೆ ಅಂಗಡಿ ಕೋಣೆಗಳನ್ನು ಬಾಡಿಗೆಗೆ ನೀಡಿ ಅಡ್ಜಸ್ಟ್‌ಮೆಂಟ್ ಮಾಡಿಕೊಂಡು ವ್ಯಾಪಕಜನಾಕ್ರೋಶಕ್ಕೆ ತುತ್ತಾಗಿತ್ತು. ಇದೀಗ ಹೊಸ ಮೀನು ಮಾರುಕಟ್ಟೆ ಹಾಗೂ ಮೇಲ್ಮಹಡಿಯ ಅಂಗಡಿಕೋಣೆಗಳನ್ನು ಕಬ್ಜಕ್ಕೆ ತೆಗೆದು ಕೊಳ್ಳುವ ಹುನ್ನಾರ ಐರೋಡಿ ಪಂಚಾಯತ್‌ಗಿದೆ. ಹಸಿ ಮೀನು ಮಾರಾಟಗಾರರ ಸಂಘ, ಅಥವಾ ಮೀನುಗಾರಿಕಾ ಫೆಡರೇಷನ್‌  ಈ ಮೀನುಮಾರುಕಟ್ಟೆಯ ನಿರ್ವಹಣೆಗೆ ಹಕ್ಕು ಕೇಳುವ ಸಾದ್ಯತೆಯೂ ಇಲ್ಲದಿಲ್ಲ. ರಸ್ತೆಗೆ ಕಾಣುವಂತೆ ಮಾತ್ರಾ ಗಾರೆ, ಸುಣ್ಣ ಬಣ್ಣ ಬಿಟ್ಟರೆ ಇನ್ನೊಂದು ದಿಕ್ಕಿಗೆ ಗಾರೆಯನ್ನೂ ಸರಿಯಾಗಿ ಮಾಡಿಲ್ಲ ಎಂದರೆ ಇದರಲ್ಲಿ ಯಾವಪರಿಯಲ್ಲಿ ಅಪರಾ ತಪರಾ ಆಗಿದೆ ಎಂದು ಅಂದಾಜಿಸಬಹುದು. .

ಸಧ್ಯಕ್ಕೆ ಈ ಜಾಗದಲ್ಲೇ ಮೀನುಮಾರಾಟ

ಮಾತಾಡಬೇಕಾದವರು ಮಾತಾಡುತ್ತಿಲ್ಲ

ಒಟ್ಟಾರೆ ಕಳೆದ ಮೂರು ವರುಷದಿಂದ ರಸ್ತೆ ಬದಿಯಲ್ಲಿಕುಳಿತು ಧೂಳು ನುಂಗುತ್ತಿದ್ದ ಮೀನು ಮಾರುವ ತಾಯಂದಿರಿಗೆ ವ್ಯವಸ್ಥಿತವಾದ ಮಾರ್ಕೇಟು ನಿರ್ಮಾಣವಾಗಲಿ, ಸರಕಾರದ ಹಣ ಲೂಟಿ ಮಾಡಿದ ಗುತ್ತಿಗೆದಾರ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲಿ. ನಿರ್ಮಿತಿ ಕೇಂದ್ರದವರು ತಮ್ಮ ಪಾಲಿನದನ್ನು ಎಂದರೆ ತಮಗೆ ಸಲ್ಲಬೇಕಾದ ಕಮೀಷನ್ ಹಣವನ್ನು ಪಡೆದು ಕಾನೂನು ಬಾಹೀರವಾಗಿ ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆ ನೀಡುವುದು ಮೊದಲು ನಿಲ್ಲಬೇಕಿದೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ನಿರ್ಮಿತಿ ಕೇಂದ್ರದ ಭ್ರಷ್ಟರು ಅಲ್ಲೇ ಮೊಕ್ಕಾಂಮ್ ಹೂಡಿಕೊಂಡು, ಗೂಟ ಬಡಿದುಕೊಂಡು ಬಿದ್ದಿರುತ್ತಾರೆ. ಬಹುಕೋಟಿ ಹಗರಣದ ತಿಪ್ಪೆಯಲ್ಲಿದ್ದರೂ ಈ ನಿರ್ಮಿತಿ ಕೇಂದ್ರದ ಬಗ್ಗೆ ಆಳುವ ಪ್ರತೀ ಪಕ್ಷವೂ ತೆಪ್ಪಗಿರುವುದರ ಹಿಂದೆ ಕಪ್ಪ’ದ ಕಥೆ ಇದೆಯಾ? ಗೊತ್ತಿಲ್ಲ. ಈ ಭಾಗದ ಶಾಸಕರೂ ಈ ಬಗ್ಗೆ ತಕ್ಷಣವೇ ಗಮನ ಹರಿಸಲಿ. ಸಂಸದೆಯರಿಗೂ ಇದು ಗೊತ್ತಿರಲಿ. ಉಸ್ತುವಾರಿ ಮಂತ್ರಿ ಬಸವರಾಜ್ ಬೊಮ್ಮಾಯಿ ಈ ಕಡೆ ಒಮ್ಮೆ ತಿರುಗಿ ನೋಡಲಿ ಎನ್ನುವುದು ಪತ್ರಿಕೆಯ ಆಶಯ. ಬಡ ಮೀನು ವ್ಯಾಪಾರಿಗಳಿಗೆ ಎಂದು ನಿರ್ಮಾಣವಾದ ಸುಸಜ್ಜಿತ ಎಂಬ ಹೆಸರಿನ ಮೀನು ಮಾರುಕಟ್ಟೆ ಎಲ್ಲಾ ಇಲ್ಲಗಳ ನಡುವೆ ಕಾಮಗಾರಿ ಪೂರ್ತಿಗೊಳಿಸಿದೆ ಎಂದು ಷರಾ ಬರೆದುಕೊಂಡಿದೆ. ಈಗಾಗಲೇ ಬಿಲ್ ಪಾಸ್ ಆಗಿರುತ್ತದೆ ಆದ್ದರಿಂದ ಗುತ್ತಿಗೆದಾರರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಉಡುಪಿ ಜಿಲ್ಲಾ ಜಿಲ್ಲಾಧಿಕಾರಿಗಳು ಇದರ ಬಗ್ಗೆ ಸೂಕ್ತ ತನಿಖೆ ನಡೆಸಲೇ ಬೇಕು. ಸ್ಥಳವನ್ನ ಪರಿಶೀಲನೆ ನಡೆಸಿ ಪ್ರಸ್ಥಾವನೆಯಲ್ಲಿರುವ ಎಲ್ಲಾ ವ್ಯವಸ್ಥೆಯನ್ನೂ ಅಳವಡಿಸಿದ್ದಾರಾ ಇಲ್ಲವಾ ಎಂಬುದನ್ನು ಪರಿಶೀಲನೆ ನಡೆಸಲಿ ಎಂಬ ಉದ್ದೇಶದಿಂದಷ್ಟೇ ಈ ವರದಿ.

ಇದು ಕೊಟ್ಟಿಗೆಯಲ್ಲ ಮೀನು ಮಾರಾಟ ಸ್ಥಳ!

ನಿಮ್ಮ ಅಭಿಮತ ನ್ಯೂಸ್ ಬ್ಯೂರೋ.

Leave a Comment