6 ಮಂದಿ ಆರೋಪಿಗಳ ಬಂಧನ
ದಾವಣಗೆರೆ : ಇಲ್ಲಿನ ಹೈವೆಯಲ್ಲಿ ಡಿ.29ರಂದು ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ನಿಸಾರ, ರಾಹುಲ್, ನದೀಮ್, ಜಾಕೀರ್ ಸಾಬ್, ಬಳ್ಳಾರಿ ನಾಗರಾಜ್, ಶ್ಯಾಮ್ ಸುಂದರ್, ಮನೋಹರ್ ಮತ್ತು ಉದಯ್ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳಿಂದ ೨೪೦ ಕೆಜಿ ಬೆಳ್ಳಿ ಎರಡು ವಾಹನ, ಪಿಸ್ತೂಲ್ ಮತ್ತು 5 ಜೀವಂತ ಗುಂಡನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ನಿಸ್ಸಾರ್ ಮತ್ತು ರಾಹುಲ್ ಬಂಧನ ಮಾಡಿದ್ದ ಪೊಲೀಸರು ನಂತರ ಉಳಿದ ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲ್ಹಾಪುರದ ಜಗನ್ನಾಥ್ ಖಂಡೇಕರ್ ಎಂಬುವವರಿಗೆ ಸೇರಿದ ಬೆಳ್ಳಿಯ ಗಟ್ಟಿಗಳು ಇದಾಗಿದ್ದು, ಕೊಲ್ಹಾಪುರದಿಂದ ತಮಿಳುನಾಡಿನ ಸೇಲಂಗೆ ಸಾಗಾಟ ಮಾಡುತ್ತಿದ್ದರು. ಈ ಕುರಿತು ಮಾಹಿತಿ ಪಡೆದ ಆರೋಪಿಗಳು ದರೋಡೆಗೆ ಸಂಚು ರೂಪಿಸಿ, ಕಾರಿನಲ್ಲಿ ಚಿತ್ರದುರ್ಗಕ್ಕೆ ಕರೆದೊಯ್ದು ದರೋಡೆ ಮಾಡಿದ್ದರು.
ಬಳಿಕ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.