ಸಾಲಿಗ್ರಾಮ ಪಟ್ಟಣ ಪಂಚಾಯತ್ ಲಂಚಾಸುರ ಸೋಮಯಾಜಿ ಮುಕ್ಕುವುದೆಷ್ಟು ಗೊತ್ತಾ?

ಸಾಲಿಗ್ರಾಮ ಪಟ್ಟಣ ಪಂಚಾಯತ್ ಎಂಬ ಆಡಳಿತ ಯಂತ್ರವೇ ತುಕ್ಕು ಹಿಡಿದು ಬಿದ್ದಿದೆ!ಲಂಚರಾವಣರ ನಡುವೆ ನಲುಗಿ ಹೋಗಿದೆ! ಚುನಾವಣೆ ಮುಗಿದು ಒಂದು ವರ್ಷವಾದರೂ ಇನ್ನೂ ಆಡಳಿತ ಮಂಡಳಿಯ ರಚೆನೆಯಾಗಿಲ್ಲ, ಇಲ್ಲಿ ಬಕಾಸುರ ಹಸಿವಿನ ಚಂದ್ರಶೇಖರ್ ಸೋಮಯಾಜಿ ಎಂಬ ಬ್ರಹ್ಮಾಂಡ ಭ್ರಷ್ಟಾಚಾರಿ ಇಲ್ಲಿಗೆ ವಕ್ಕರಿಸಿ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದಾನೆ! ಬಡವರ ಮನೆಯ ಕಕ್ಕಸು ಹೊಂಡದಲ್ಲಿಯೂ ಕಾಸು ಎತ್ತುವ ಬಿಕನಾಸಿ ಈ ಚಂದ್ರಶೇಖರ್ ಸೋಮಯಾಜಿ!  

 ಎಲ್ಲಿಯವ ಸೋಮಯಾಜಿ?

ಚಂದ್ರಶೇಖರ್ ಸೋಮಯಾಜಿಯ ಮೂಲ ಕಾರ್ಕಡ. ಮೊದಲು ಬಂದು ವಕ್ಕರಿಸಿಕೊಂಡಿದ್ದೇ ಸಾಲಿಗ್ರಾಮ ಪಟ್ಟಣ ಪಂಚಾಯತಿಗೆ. ದಿನಬೆಳಗಾದರೆ ದುಡ್ಡು ದುಡ್ಡು ದುಡ್ಡು ಎಂದು ಸಾಯುವ ಈ ಸೋಮಯಾಜಿ  ಸಣ್ಣ ಕೆಲಸಕ್ಕೂ ಪೀಕುವುದು ಸಾವಿರ ಸಾವಿರ ರೂಪಾಯಿ!ಬಡವರ ರಕ್ತ ಹೀರುವ ಸೋಮಯಾಜಿ ಅಂಡ್ ಲಂಚಬಾಕರ ಟೀಮಿಗೆ ಕಡಿವಾಣ ಹಾಕುವವರಾದರು ಯಾರು? ಈ ಪಾಟಿ ಬಡವರ ಜೀವತಿನ್ನುವ ಬ್ರಹ್ಮರಾಕ್ಷಸ ಎಲ್ಲಿಯವನು ಎಂದು ಹುಡುಕುತ್ತಾ ಹೋದರೆಈ ಸೋಮಯಾಜಿಯ ಮೂಲ ಕಾರ್ಕಡವಂತೆ! ನಿಮಗೂ ಗೊತ್ತೇ ಇದೆ ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿರುವ ಸಂಗತಿ ಇಂದು ನಿನ್ನೆಯ ಕಥೆಯಲ್ಲ .ಇಲ್ಲಿ ಒಂದೊಂದು ಫೈಲುಗಳು ಆಚೀಚೆ ಸರಿದಾಡಬೇಕಾದರೆ ಇಂತಿಷ್ಟು ಹಣ ಮಡುಗಲೇ ಬೇಕು ಅನ್ನುವ ಸಿಚುವೇಷನ್ನಿದೆ, ಇಲ್ಲಿರುವ ಕೆಲವಷ್ಟು ಅದಿಕಾರಿಗಳಲ್ಲಿ ಪ್ರಾಮಾಣಿಕರೂ ಇದ್ದಾರೆ, ಈಗೀನ ಮುಖ್ಯಾಧಿಕಾರಿ ಅರುಣ್ ಕುಮಾರ್ ಸಭ್ಯರು ಎನ್ನುವ ಮಾತಿದೆ, ಆದರೆ ಅವರ ಕಟ್ಟು ನಿಟ್ಟಿನ ಶಿಸ್ತಿನ ನಡುವೆಯೂ ಕೆಲವಷ್ಟು ಅಧಿಕಾರಿಗಳು ಸಾಲಿಗ್ರಾಮ ವ್ಯಾಪ್ತಿಯ ಬಡವರ ರಕ್ತ ಹೀರಲು ಕುಳಿತು ಬಿಟ್ಟಿದ್ದಾರೆ..!

 ಬಕಾಸುರ ಸೋಮಯಾಜಿ

ಅನೇಕ ವರುಷಗಳಿಂದ ಸಾಲಿಗ್ರಾಮ ಪಂಚಾಯತ್ ‌ನಲ್ಲೇ ಫೆವಿಕಾಲ್ ಅಂಟಿಸಿಕೊಂಡು ಕುಳಿತಿರುವ ದ್ವೀತಿಯ ದರ್ಜೆ ಸಹಾಯಕ ಸೋಮಯಾಜಿಯ ಫೈಲು ಕಾಂಚಾಣದ ಮುಖ ನೋಡದೆ ಅಲುಗಾಡುವುದೇ ಇಲ್ಲ, ಮನೆ ಸಬ್ಸಿಡಿ ಲೋನು ಬಿಡುಗಡೆಯಾಗಬೇಕಾದರೆ ಇಪ್ಪತ್ತು ಸಾವಿರ ಮೊದಲಿಗೆ ಜೇಬಿಗೆ ತುರುಕಬೇಕು! ಹಣ ಇಲ್ಲದೇ ಹೋದಲ್ಲಿ ನಿಮ್ಮ ಆಶ್ರಯ ಲೋನು ಯಾವ ಕಾರಣಕ್ಕೂ ಸ್ಯಾಂಕ್ಷನ್ ಆಗುವುದಿಲ್ಲ,ಈತನ ವ್ಯಾಪ್ತಿಗೆ ಬರುವ ಇತರೇ ಕೆಲಸಗಳು ಕೂಡ ಹಣವಿಲ್ಲದೇ ಮುಂದಕ್ಕೆ ಓಡುವುದಿಲ್ಲ. ಪಟ್ಟಣ ಪಂಚಾಯತ್ ತುಂಬಾ ಸಿಸಿಟಿವಿ ಕಣ್ಗಾವಲಿದ್ದರೂ ಕೂಡ ಯಾವುದೇ ಮುಲಾಜಿಗೇ ಬೀಳದೆ ಈತ ಹಣ ಪೀಕುತ್ತಾನೆ, ಎಸಿಬಿ ಅಧಿಕಾರಿಗಳು ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಸಿಸಿಟಿವಿ ದಾಖಲೆಗಳು ತೆಗೆದು ಪರಿಶೀಲಿಸಿದರೆ ಇಲ್ಲಿ ನಡೆಯುವ ಬ್ರಹ್ಮಾಂಡ ಭ್ರಷ್ಟಾಚಾರದ ವಿಶ್ವರೂಪ ದರ್ಶನವಾಗಲಿರುವುದು ಗ್ಯಾರಂಟಿ(ಈ ವರದಿ ನೊಡುತ್ತಲೆ ಸಿಸಿಟಿವಿ ದಾಖಲೆಗಳು ಡಿಲೇಟ್ ಆದರೆ ನಾವು ಹೊಣೆಯಲ್ಲ)ಸರಕಾರದ ಸಬ್ಸಿಡಿ ದುಡ್ಡು ನಂಬಿ ಕಷ್ಟ ಪಟ್ಟು ಮನೆಕಟ್ಟಲು ನಿಲ್ಲುವ ಅದೇಷ್ಟೋ ಬಡವರ ರಕ್ತ ಹೀರಿ ಹಣ ಮಾಡಲು ನಿಂತಿರುವ ಸೋಮಯಾಜಿಯಂತಹ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗಲಿ ಎನ್ನುವುದು ಪತ್ರಿಕೆ ಹಾರೈಕೆ.

ನಿಮ್ಮ ಅಭಿಮತ ನ್ಯೂಸ್ ಬ್ಯೂರೋ.

Leave a Comment