ಉಡುಪಿಗೆ ನೂತನ ಎಸ್‌ಪಿ ನಿಶಾ ಜೇಮ್ಸ್‌!

ಉಡುಪಿ: ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ್ ಬಿ. ನಿಂಬರ್ಗಿಯವರು ಬೆಂಗಳೂರಿಗೆ ವರ್ಗಾವಣೆಯಾಗಿದ್ದು ಅವರ ಸ್ಥಾನಕ್ಕೆ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಶಾ ಜೇಮ್ಸ್ ಆಗಮಿಸಲಿದ್ದಾರೆ.

ಪ್ರಸ್ತುತ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ನಿಶಾ ಜೇಮ್ಸ್ , 2017 ರಲ್ಲಿ ನಿಶಾ ಜೇಮ್ಸ್ ರಾಯಚೂರಿನಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸಿ ಆಂದ್ರ ಗಡಿಯಲ್ಲಿನ ಮದ್ಯದ ಅಕ್ರಮ ಜಾಲ, ಗೂಂಡಾಗಿರಿ, ಇಸ್ಪಿಟ್ ಅಡ್ಡೆಗಳ ಬಂದ್, ಮಟ್ಕಾ ದಂಧೆಗೆ ಸಂಪೂರ್ಣ ಬ್ರೇಕ್ ಹಾಕಿ ಅತ್ಯಂತ ಪ್ರಾಮಾಣಿಕ ಮತ್ತು ಖಡಕ್ ಅಧಿಕಾರಿ ಎನ್ನುವ ಖ್ಯಾತಿ ಹೊಂದಿದ್ದವರು. ಇದುವರೆಗೂ ಚಿತ್ರದುರ್ಗ, ಶಿವಮೊಗ್ಗ, ಮತ್ತು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿ ಎಲ್ಲೆಡೆಯೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕೊಪ್ಪಳದ ಎಸ್.ಪಿ. ಆಗಿ ಪಾತಕಿಗಳ ಎದೆ ನಡುಗಿಸಿದ್ದ ಸೂಪರ್ ಕಾಪ್ ಪೊಲೀಸ್ ಅಧಿಕಾರಿ ಡಾ.ಅನೂಪ್ ಶೆಟ್ಟಿಯವರ ಪತ್ನಿಯಾಗಿರುವ ನಿಶಾ ಜೇಮ್ಸ್ ವೃತ್ತಿ ಜೀವನದಲ್ಲಿ ತನ್ನ ಪತಿಯಂತೇ ಯಾರ ಮುಲಾಜಿಗೂ ಒಳಗಾಗದೆ ಸೂಪರ್ ಕಾಪ್ ಖ್ಯಾತಿಗೆ ಒಳಗಾದವರು. ಇವರು ಬೆಳ್ತಂಗಡಿ ಮೂಲದ ಗುರುವಾಯನ ಕೆರೆಯವರಾದ ಡಾ. ಅನೂಪ್ ಶೆಟ್ಟಿ ಪಬ್ಲಿಕ್ ಹೀರೋ ಆಗಿ ಕೂಡ ಗುರುತಿಸಿಕೊಂಡವರು.. ನಿಶಾ ಜೇಮ್ಸ್ ರಾಯಚೂರಿನಲ್ಲಿಯೂ ಪೊಲೀಸ್ ವರಿಷ್ಠಾಧಿಕಾರಿಯಾಗಿ ದೊಡ್ಡ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದ್ದರು..

ಉಡುಪಿಯಿಂದ ವರ್ಗಾವಣೆಯಾಗುತ್ತಿರುವ ಲಕ್ಷ್ಮಣ್ ಬಿ. ನಿಂಬರ್ಗಿಯವರು ಉಡುಪಿ ಜಿಲ್ಲೆಯ ಅತ್ಯಂತ ಸೂಪರ್ ಕಾಪ್, ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಹಿರಿಯಡ್ಕದ ಹಸನಬ್ಬ ಪ್ರಕರಣ, ಶೀರೂರು ಸ್ವಾಮಿ ಪ್ರಕರಣ, ಲಾಠಿ ಚಾರ್ಜ್ ಪ್ರಕರಣ, ಮತ್ತು ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಕೋಟ ಡಬಲ್ ಮರ್ಡರ್ ಪ್ರಕರಣವನ್ನ ಸಮರ್ಥವಾಗಿ ಎದುರಿಸಿ ಜನತೆಯೆ ಮೆಚ್ಚುಗೆಗೆ ಪಾತ್ರರಾಗಿದ್ದರು. ಯುವಕರಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಡ್ರಗ್ಸ್ ಮಾಫಿಯಾದ ವಿರುದ್ದ ಆಂಧೋಲನಗಳನ್ನ ರೂಪಿಸುವಲ್ಲಿ ಮಹತ್ತರವಾದ ಪಾತ್ರವನ್ನ ನಿರ್ವಹಿಸಿದ್ದ ಲಕ್ಷ್ಮಣ್ ಬಿ. ನಿಂಬರ್ಗಿ ಅತ್ಯಂತ ಪ್ರಾಮಾಣಿಕ ಎಸ್.ಪಿ. ಎನ್ನುವ ಕೀರ್ತಿಗಳಿಸಿದ್ದವರು. ಪೋನ್ ಇನ್ ಕಾರ್ಯಕ್ರಮದ ಮೂಲಕ ಜನತೆಯ ಸಮಸ್ಯೆಗೆ ನೇರವಾಗಿ ಕಿವಿಯಾಗುತ್ತಿದ್ದ ಲಕ್ಷ್ಮಣ್ ಬಿ. ನಿಂಬರ್ಗಿಯವರ ವರ್ಗಾವಣೆಗೆ ಜಿಲ್ಲೆಯಲ್ಲಿ ಬಹುತೇಕ ಬೇಸರವನ್ನ ತಂದಿದೆ ..

-ಅಭಿಮತ ನ್ಯೂಸ್ ರೂಮ್

Leave a Comment