ಸುನಿಲ್ ಕುಮಾರ್ ಮಂತ್ರಿಯಾಗ್ತಾರಾ?!

ನಿಮ್ಮಾಭಿಮತಸುದ್ದಿ: ಸುನಿಲ್ ಕುಮಾರ್ ಮಂತ್ರಿಯಾಗುವ ಧಟ್ಟ ಸಾಧ್ಯತೆಗಳು ರಾಜ್ಯ ರಾಜಕಾರಣವನ್ನ ಹೊಸ ಬೆಳವಣಿಗೆಯ ಕಡೆ ಹೊರಳುವಂತೆ ಮಾಡಿದೆ. ವಿ ಸುನಿಲ್ ಕುಮಾರ್ ಕಾರ್ಕಳ ಶಾಸಕರಾಗಿದ್ದು ಜಿಲ್ಲೆಯ ಹಿರಿಯ ಶಾಸಕರೂ ಸುನಿಲ್ ಕುಮಾರ್ ಗೆ ಸಚಿವ ಪಟ್ಟ ಕೊಡುವಲ್ಲಿ ಗಟ್ಟಿಯಾಗಿ ನಿಂತಿರುವುದಾಗಿ ಬಲ್ಲ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಉಡುಪಿ ಜಿಲ್ಲೆಗೆ ಹೊರ ಜಿಲ್ಲೆಯ ಬಸವರಾಜ ಬೊಮ್ಮಾಯಿ ಉಸ್ತುವಾರಿ ಸಚಿವರಾಗಿದ್ದು ಕೋಟ ಶ್ರೀನಿವಾಸ ಪೂಜಾರಿಯವರು ಮಂಗಳೂರು ಉಸ್ತುವಾರಿ ಸಚಿವರಾಗಿದ್ದು ಸುನಿಲ್ ಕುಮಾರ್ ಉಡುಪಿ ಜಿಲ್ಲಾ ಕೋಟಾದಲ್ಲಿ ಮಂತ್ರಿಯಾಗುತ್ತಾರೆ ಎನ್ನಲಾಗಿದ್ದು. ರಾಜ್ಯ ರಾಜಕಾರಣದ ಬಗ್ಗೆ ಕರಾವಳಿ ಬಹಳ ಕುತೂಹಲದಿಂದ ಕಾಯುತ್ತಿದೆ

ಹಿಂದೂ ಸಂಘಟನೆಯ  ಮೂಲಕ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದ ಸುನಿಲ್ ಕುಮಾರ್ ಸಂಘಟನ ಚತುರ ಎಂಬ ಖ್ಯಾತಿಗೆ ಒಳಗಾದ ರಾಜಕಾರಣಿ. ಯುವರಾಜಕಾರಣಿಯೂ ಆಗಿರುವ ಸುನಿಲ್ ಕುಮಾರ್ ಬಗ್ಗೆ ಪಕ್ಷದ ಹಿರಿಯ ನಾಯಕರು ಮತ್ತು ಸಂಘದ ಪ್ರಮುಖರೂ ಒಲವು ತೋರಿಸಿರುವುದು, ಸುನಿಲ್ ಕುಮಾರ್ ಆಯ್ಕೆದಾರಿ ಸಲೀಸು ಎಂಬ ಮಾಹಿತಿ ದೊರಕುತ್ತಲಿದೆ.

Leave a Comment