ರಾಜ್ಯ ಬಿಜೆಪಿಗೆ ಯುವ ನಾಯಕತ್ವ: ಸುನಿಲ್ ಕುಮಾರ್ ಆಗ್ತಾರಾ ರಾಜ್ಯ ಬಿಜೆಪಿ ಅಧ್ಯಕ್ಷ?!!

ಕಾರ್ಕಳದ ಸುನಿಲ್ ಕುಮಾರ್ ರಾಜ್ಯ ಬಾಜಪ ಚುಕ್ಕಾಣಿ ಹಿಡಿಯಲಿದ್ದಾರಾ? ಹಾಗೊಂದು ಸುದ್ದಿ ಸದ್ದು ಮಾಡುತ್ತಿದೆ. ರಾಜ್ಯ ಬಾಜಪ ಅಧ್ಯಕ್ಷರಾದ ಯಡಿಯೂರಪ್ಪನವರು ವಿರೋಧ ಪಕ್ಷದ ಅಧ್ಯಕ್ಷರೂ ಆಗಿರುವ ಹಿನ್ನೆಲೆಯಲ್ಲಿ ರಾಜ್ಯಧ್ಯಕ್ಷ ಚುಕ್ಕಾಣಿಗೆ ಬೇರೊಬ್ಬ ನಾಯಕರನ್ನ ಬಾಜಪ ತರಲಿದೆ ಎನ್ನುವುದು ಈ ಸುದ್ದಿಯ ಮೂಲ. ಸುನಿಲ್ ಕುಮಾರ್ ರಾಜ್ಯಾಧ್ಯಕ್ಷರಾಗಲಿಕ್ಕಿರುವ ಮಾನ ದಂಡಗಳೇನು ಎನ್ನುವುದನ್ನ ಪರಿಶೀಲಿಸಿದರೆ ಹತ್ತಾರು ಸಮರ್ಥ ಅರ್ಹತೆಗಳು ಸುನಿಲ್ ಕುಮಾರರಿಗಿರುವುದು ಕಂಡು ಬರುತ್ತದೆ. ರಾಜಕೀಯವಾಗಿ ಕರಾವಳಿಯ ಅತ್ಯಂತ ಪ್ರಭಾವಶಾಲಿ ನಾಯಕ, ಎಲ್ಲಿಯೂ ಹೆಸರು ಕೆಡಿಸಿಕೊಂಡವರಲ್ಲ ಎನ್ನುವುದು ಒಂದು ಬಲವಾದರೆ ವಿವಾದಾತೀತ ಎನ್ನುವುದು ಇನ್ನೊಂದು ವಜನ್ನು .

ವಿವಾಧಗಳೇ ಇಲ್ಲದ ಸಮರ್ಥ ಆಡಳಿತ ಅನುಭವ, ಶಾಸಕನಾದ ಅವಧಿಯಲ್ಲಿ ಕ್ಷೇತ್ರದಲ್ಲಿ ಬೃಹತ್ ಅಭಿವೃದ್ದಿ ನಡೆಸಿದ ಪ್ರಖ್ಯಾತಿ, ಎಲ್ಲಾ ಶಾಸಕರಂತೆ ಐದು ವರ್ಷ ಅಧಿಕಾರ ಮಾತ್ರ ಅನುಭವಿಸುತ್ತಾ ಕೂತಲ್ಲೇ ಕೂರದೆ ಕರಾವಳಿಯ ಮಾತ್ರವಲ್ಲದೆ ರಾಜ್ಯದ ಗಂಭೀರ ಪ್ರಕರಣಗಳನ್ನ ವಿಧಾನಸಭೆಯಲ್ಲಿ ಚರ್ಚೆಗೆ ತಂದು ಆಡಳಿತ ವ್ಯವಸ್ಥೆಯ ಕಣ್ಣು ತೆರೆಸುವ ರಾಜಕೀಯ ನಿಷ್ಣಾತತೆ ಮತ್ತು ಸುನಿಲ್ ಕುಮಾರ್ ಮಾತು ಬಲ್ಲ ನಾಯಕ ಎನ್ನುವ ಪ್ರಖ್ಯಾತಿ, ಮಾತಿನ ಮೇಲಿನ ಹಿಡಿತ, ಎಲ್ಲಿಯೂ ಅಸಂಬದ್ಧವಾಗಿ ಮಾತನಾಡದೆ, ಪಕ್ಷಕ್ಕೆ ಮುಜುಗರವಾಗದಂತೆ ನಿಖರವಾಗಿ ಪ್ರತಿಕ್ರಿಯೆ ಕೊಡುವಂತಹ ಪ್ರತ್ಯುತ್ಪನ್ನ ಮತಿತ್ವ ಸುನಿಲ್ ಕುಮಾರರಿಗೆ ಕರಗತ. ಗಿಡ, ಮರ, ಇಂಗುಗುಂಡಿ, ಕೆರೆ ಹೂಳೆತ್ತುವುದು, ಹೀಗೆ ಪರಿಸರ ಪರವಾಗಿ ಮಿಡಿಯುವ ಕರಾವಳಿಯ ಏಕೈಕ ರಾಜಕಾರಣಿ ಸುನಿಲ್ ಕುಮಾರ್..

ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾದಾಗ ಅದಕ್ಕೆ ಚಡಿಯೇಟಿನಂತೆ ಪ್ರತಿಕ್ರಿಯೆ ನೀಡುವಲ್ಲಿ ಸುನಿಲ್ ಕುಮಾರ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ, ’ಹೋರಾಟಗಳ ಮೂಲಕವೇ ರಾಜಕಾರಣಕ್ಕೆ ಎಂಟ್ರಿಕೊಟ್ಟ ಸಾಮಾನ್ಯ ಸ್ಕೂಲ್ ಮೇಷ್ಟ್ರ ಮಗ ನಾನ” ಎನ್ನುವ ಸುನಿಲ್ ಕುಮಾರ್, ರಾಜಕಾರಣಕ್ಕೆ ಸಂಘದ ಆಯ್ಕೆಯೇ ಹೊರತು ತಾನಾಗಿಯೇ ರಾಜಕಾರಣಿಯಾಗುವ ಆಸೆ ಇಟ್ಟು ಬಂದವರಲ್ಲ.

ಭಜರಂಗದಳದ ರಾಜ್ಯ ಸಂಚಾಲಕನಾಗಿ ಅದೂ ಆ ಕಾಲದಲ್ಲಿ ಅತ್ಯಂತ ದೊಡ್ಡ ಸಂಘಟನೆಯಾಗಿದ್ದ ಭಜರಂಗದಳವನ್ನ ಅತ್ಯಂತ ಸಮರ್ಥವಾಗಿ ಮುನ್ನೆಡೆಸಿದ್ದು ಸುನಿಲ್ ಕುಮಾರ್ ಹೆಗ್ಗಳಿಕೆ. ರಾಜಕಾರಣಕ್ಕೆ ಬಂದ ನಂತರ ರಾಜ್ಯ ಯುವಮೋರ್ಛಾದ ಅಧ್ಯಕ್ಷನಾಗಿಯೂ ಸಮರ್ಥ ಸಾರಥಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಸುನಿಲ್ ಕುಮಾರರ ಸಮರ್ಥ ನಡೆಗೆ ಆಧಾರವಾಗಿದ್ದು ರಾಷ್ಟೀಯ ಸ್ವಯಮ್ ಸೇವಕ ಸಂಘದ ಪರಿಣಿತಿ. ರಾಜಕಾರಣಿಗಳಲ್ಲಿ ಮುಖ್ಯವಾಗಿ ಇರಲ್ ಬೇಕಾದ “ಸಮಚಿತ್ತ ಭಾವ” ಸುನಿಲ್ ಕುಮಾರರಿಗಿದೆ. ಬಾಜಪ ಹಿಂದುಳಿದ ವರ್ಗದ ನಾಯಕನೊಬ್ಬನ ಹೆಗಲಿಗೆ ರಾಜ್ಯ ಸಾರಥ್ಯವನ್ನ ವಹಿಸುವ ನಿಟ್ಟಿನಲ್ಲಿ ಯೋಚಿಸುತ್ತಿದೆ ಎನ್ನಲಾಗಿದೆ. ಅದಕ್ಕೆ ಸುನಿಲ್ ಕುಮಾರ್ ಅತ್ಯಂತ ಸಮರ್ಥ ಎನ್ನುವುದೂ ಸುದ್ದಿಯಲ್ಲಿದೆ.

ತಾನು ನಿರ್ವಹಿಸಿದ ಎಲ್ಲಾ ಹುದ್ದೆಯನ್ನೂ ಸಮರ್ಥವಾಗಿ ನಿರ್ವಹಿಸಿರುವುದು, ಹಿಂದುಳಿದ ವರ್ಗದ ಮೂಲದಿಂದ ಬಂದ ಪ್ರಭಾವಿ ಯುವ ನಾಯಕನಾಗಿರುವುದು, ಯುವ ನಾಯಕತ್ವಕ್ಕೆ ಪಕ್ಷದ ಜವಾಬ್ದಾರಿ ನೀಡಬೇಕು ಎನ್ನುವ ಪಕ್ಷದ ನಿಲುವಿಗೆ ಸರಿ ಹೊಂದುವಂತ ಯಂಗ್ ಛಾರ್ಮ್ ಹೊಂದಿರುವುದು, ಜಾಣ್ಮೆಯ ಮಾತು ಮತ್ತು ನಿಷ್ಕಳಂಕ ವ್ಯಕ್ತಿತ್ವ, ಸಂಘದ ಹಿನ್ನೆಲೆ ಇದೆಲ್ಲದರ ಕಾರಣದಿಂದಾಗಿ ಕಾರ್ಲದ ಹುಡುಗ ಸುನಿಲ್ ಕುಮಾರ್ ಕರ್ನಾಟಕ ಬಾಜಪದ ಅಧ್ಯಕ್ಷನಾಗುವ ಸಾಧ್ಯತೆಗಳು ಹೆಚ್ಚಿವೆ. ಮುಂದೇನಾಗಲಿದೆಯೋ ಕಾದು ನೋಡಬೇಕಿದೆ..

-ನಿಮ್ಮ ಅಭಿಮತ

Leave a Comment