ಸತತ ಐದು ತಿಂಗಳ ನಂತರ ಸುವರ್ಣ ತ್ರಿಭುಜ ಬೋಟಿನ ಅವಶೇಷ ಮಹಾರಾಷ್ಟ್ರದ ಮಲ್ವಾನ್ ಪ್ರದೇಶದಲ್ಲಿ ಪತ್ತೆ
ಸುವರ್ಣ ತ್ರಿಭುಜ ಬೋಟು ಡಿಸೆಂಬರ್ 13 ರಂದು ಉಡುಪಿಯ ಮಲ್ಪೆಯಿಂದ ಹೊರಟು ನಾಪತ್ತೆಯಾಗಿತ್ತು,ಬೋಟ್ ನ ಮಾಲೀಕ ಚಂದ್ರಶೇಖರ ಮತ್ತು ಹರೀಶ,ಸತೀಶ,ಲಕ್ಷ್ಮಣ,ರಮೇಶ,ರವಿ,ದಾಮೋದರ,ರವಿ ಎಂಬ 7 ಮೀನುಗಾರರು ಕಾಣೆಯಾಗಿದ್ದರು
ಉತ್ತರಕನ್ನಡ ಜಿಲ್ಲೆಯ ಐವರು ಮತ್ತು ಉಡುಪಿ ಜಿಲ್ಲೆಯ ಇಬ್ಬರು ಮೀನುಗಾರರು ಸೇರಿದಂತೆ ಒಟ್ಟು 7 ಮೀನುಗಾರರು ಈ ಬೋಟಿನಲ್ಲಿದ್ದರು,ಘಟನೆ ಸಂಬಂಧ ಮಲ್ಪೆಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು
ಸುವರ್ಣ ತ್ರಿಭುಜ ಬೋಟಿನ ಅವಶೇಷ ಮಹಾರಾಷ್ಟ್ರದ ಮಲ್ವಾನ್ ಕಡಲತೀರದಿಂದ ಅರಬ್ಬೀಸಮುದ್ರದ 33 ಕಿಲೋಮೀಟರ್ ದೂರದಲ್ಲಿ ನೌಕಾಪಡೆ ಪತ್ತೆಮಾಡಿದೆ
ಈ ಬಗ್ಗೆ ನೌಕಾಪಡೆ ಅಧಿಕ್ರತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು,ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಪತ್ತೆಯಾಗಿರುವುದಾಗಿ ತಿಳಿಸಿದೆ.