ಉಡುಪಿ ಜಿಲ್ಲೆಯಲ್ಲಿ ಇಂದು ಕೊರೋನಾ ೧೮ ಪ್ರಕರಣ:- ಇದರಲ್ಲಿ ಮೂವರು ಪೊಲೀಸರು.

ಉಡುಪಿ ಜಿಲ್ಲೆಯ ಇಂದಿನ ಕೊರೋನಾ ಪ್ರಕರಣಗಳ ಕುರಿತು ಉಡುಪಿ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದು, ಇಂದು ಜಿಲ್ಲೆಯಲ್ಲಿ 18 ಪ್ರಕರಣಗಳು ದಾಖಲಾಗಿದೆ.

ಈ ೧೮ ಪ್ರಕರಣಗಳಲ್ಲಿ 14 ಪ್ರಕರಣಗಳ ಮೂಲ ಮಹಾರಾಷ್ಟ್ರವಾದರೆ ಇನ್ನುಳಿದಂತೆ ನಾಲ್ಕು ಪ್ರಕರಣಗಳಲ್ಲಿ ಓರ್ವ ಗರ್ಭಿಣಿ ಮಹಿಳೆ ಮತ್ತು 1 ಎಎಸ್‌ಐ ಮತ್ತುಳಿದ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳಾಗಿದ್ದು, ಕಾರ್ಕಳದ ಅಜೆಕಾರು, ಗ್ರಾಮಾಂತರ ಮತ್ತು ಬ್ರಹ್ಮಾವರ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಾಗಿದ್ದಾರೆ. ಮುಂದಿನ ೪೮ ಗಂಟೆಗಳ ಕಾಲ ಈ ಮೂರು ಠಾಣೆಗಳನ್ನು ಬಂದ್ ಮಾಡಿ, ಇಲ್ಲಿನ ಸಿಬ್ಬಂದಿಗಳಿಗೆ ಕ್ವಾರಂಟೈನ್‌ಗೆ ನೀಡಲಾಗಿದೆ.

 

Leave a Comment