ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಭಾ ರಾಣಿ ಕೊರ್ಲಪಾಟಿ ಮತ್ತು ಬಾಗಲಕೋಟೆ ಯುಕೆಪಿ ಆಯುಕ್ತ ಉಜ್ವಲ್ಕುಮಾರ ಘೋಷ್ ಹುಬ್ಬಳ್ಳಿಯ ಉಪನೋಂದಣಿ ಕಚೇರಿಯಲ್ಲಿ ಸೋಮವಾರ ನಡೆದ ಸರಳ ಮದುವೆ ಮೂಲಕ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು.
ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ಸಿಟಿ ಎಂಡಿಯಾಗಿದ್ದ ಹೆಫ್ಸಿಬಾರಾಣಿ ಇತ್ತಿಚಿಗೆ ಉಡುಪಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಹೊಂದಿದ್ದರು. ಬಾಗಲಕೋಟೆಯ ಕೃಷ್ಣ ಮೇಲ್ದಂಡೆ ಯೋಜನೆ ಪುನರ್ವಸತಿ ಮತ್ತು ಪುನರ್ನಿರ್ಮಾಣ ಆಯುಕ್ತರಾಗಿ ಉಜ್ವಲ್ಕುಮಾರ್ ಸೇವೆ ಸಲ್ಲಿಸುತ್ತಿದ್ದಾರೆ.
ಒಂದು ತಿಂಗಳ ಹಿಂದೆ ವಿವಾಹಕ್ಕೆ ಅರ್ಜಿ ಸಲ್ಲಿಸಿದ್ದ ಈ ಇಬ್ಬರು ಅಧಿಕಾರಿಗಳು ಕುಟುಂಬ ಸದಸ್ಯರ ಮತ್ತು ಸ್ನೇಹಿತರ ಸಮ್ಮುಖದಲ್ಲಿ ರಿಜಿಸ್ಟಾರ್ಗೆ ಸಹಿ ಹಾಕಿ ಪರಸ್ಪರ ಮಾಲೆ ವಿನಿಮಯ ಮಾಡಿಕೊಂಡರು.

ಈ ಸರಳ ಮದುವೆ ಸಮಾರಂಭಕ್ಕೆ ಹಿರಿಯ ಐಎಎಸ್ ಅಧಿಕಾರಿಗಳಾದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯಕ್ತ ಆರ್.ವಿಶಾಲ್, ಸಾರ್ವಜನಿಕ ಸೂಚನಾ ಆಯುಕ್ತ ಪಿ.ಪಿ.ಜಾಫರ್, ಇ-ಆಡಳಿತ ನಿರ್ದೇಶಕ ಸುನಿಲ್ ಪನವಾರ್ ಸಾಕ್ಷಿಯಾಗಿ ಸಹಿ ಮಾಡಿದರು. ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್, ಬಿಆರ್ಟಿಎಸ್ ವ್ಯವಸ್ಥಾಪ ನಿರ್ದೇಶಕ ರಾಜೇಂದ್ರ ಚೋಳನ್, ಅರಣ್ಯ ಸಂರಕ್ಷಣಾಧಿಕಾರಿ ಡಿ. ಮಹೇಶಕುಮಾರ, ಅರಣ್ಯ ಉಪ ಸಂರಕ್ಷಣಾಧಿಕಾರಿಗಳು, ತಹಸೀಲ್ದಾರ್ ಶಶಿಧರ ಮಾಡ್ಯಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು