ರಾಷ್ಟ್ರವನ್ನ ಪ್ರೀತಿಸುವ ಪ್ರತಿಯೊಬ್ಬನಲ್ಲಿ ಕಣ್ಣೀರು ತರಿಸುವ ಸಿನಿಮಾ

ಮ್ಯೂನಿಚ್ ಎಂಬ ಸಿನಿಮಾ ಬಂದಿತ್ತು ಇಂಗ್ಲೀಷಲ್ಲಿ. ಒಲಂಪಿಕ್ ನಡೆಯುವಾಗ ತನ್ನ ಕ್ರೀಡಾಪಟುಗಳನ್ನ ಕೊಂದ ಭಯೋತ್ಪಾದಕ ಗುಂಪಿನವರನ್ನ ಇಸ್ರೇಲಿನ ಮೊಸಾದ್ ಎಂಬ ಬೇಹುಗಾರಿಕಾ ಪಡೆ ಹೇಗೆ ಹೆಕ್ಕಿ ಹೆಕ್ಕಿಅಟ್ಟಾಡಿಸಿ ಕೊಂದಿತ್ತು ಎಂಬುದರ ಬಗ್ಗೆ. ಎಂಟ್ಹತ್ತು ವರ್ಷಗಳ ಹಿಂದೆ ಆ ಸಿನಿಮಾ ನೋಡಿದಾಗ ಇಸ್ರೇಲ್ ಬಗ್ಗೆ ಹೆಮ್ಮೆ ಎನ್ನಿಸಿತ್ತು. ಅದಾಗಲೆ ‘ಮತ್ತೆ ಹೊತ್ತಿತು ಹಿಬ್ರೂ ಹಣತೆ’ ಎಂಬ ಪುಸ್ತಕ ಓದಿ ಇಸ್ರೇಲ್ ಬಗ್ಗೆ ಅಭಿಮಾನ ಹೊಂದಿದ್ದೆ. ಮ್ಯೂನಿಚ್ ನೋಡಿದ ನಂತರ ಇಸ್ರೇಲಿನ ಬಗ್ಗೆ ಸ್ವಲ್ಪ ಸ್ವಲ್ಪ ಓದಿ ಓದಿ ಅದರ ತಾಖತ್ತನ್ನ ಕಂಡು ಅಚ್ಚರಿಪಟ್ಟಿದ್ದೆ. ಅಲ್ಲಿನ ಜನರ ದೇಶಭಕ್ತಿಯೇ ಅಲ್ಲಿನ ನಾಯಕರ ಗಡಸುತನಕ್ಕೆ ಗಂಡಸುತನಕ್ಕೆ ಕಾರಣವಾಗಿರಬಹುದೇ? ಎಂದನ್ನಿಸಿತ್ತು. ನಮ್ಮ ದೇಶದ ಬೆನ್ನುಹುರಿಯಿಲ್ಲದ ರಾಜಕೀಯ ನಾಯಕರುಗಳನ್ನ ಕಂಡು ಬೇಸರವೂ ಪಟ್ಟಿದ್ದೆ.

ದಿನಬೆಳಗಾದರೆ ಬಾಂಬ್ ಸ್ಪೋಟˌ ದಿನಪತ್ರಿಕೆ ತಿರುಗಿಸಿದರೆ ಭಯೋತ್ಪಾದಕರ ದಾಳಿ. ಕಡೆಗೆ ಸೇನಾ ನೆಲೆಗಳನ್ನೇ ಟಾರ್ಗೆಟ್ ಮಾಡಿ ಉಗ್ರರ ದಾಳಿ ಏನಾಗ್ತಿದೆ ಈ ದೇಶದಲ್ಲಿ ಅನ್ನಿಸುವಷ್ಟರಲ್ಲಿ ಸಣ್ಣ ಗುಸುಗುಸು ಭಾರತೀಯ ಸೈನಿಕರು ಮಯನ್ಮಾರ್ ಒಳಗೆ ನುಗ್ಗಿ ಭಯೋತ್ಪಾದಕರ ಗುಂಪನ್ನ ಸರ್ಜಿಕಲ್ ಸ್ಟ್ರೈಕ್ ಮೂಲಕ ಹೊಡೆದುರುಳಿಸಿದೆ! ವಾವ್ ನಮ್ಮ ದೇಶವೂ ಇಂತಹ ಕಾರ್ಯಾಚರಣೆ ಮಾಡುವ ಧೈರ್ಯ ಇರುವ ನಾಯಕರುಗಳನ್ನ ಪಡೆಯಿತು ಎನ್ನುವಾಗಲೇ ನಡೆದದ್ದು ಜಮ್ಮುಕಾಶ್ಮೀರದ ಉರಿ ಎಂಬಲ್ಲಿನ ಸೇನಾ ನೆಲೆಯ ಮೇಲಿನ ಉಗ್ರರ ದಾಳಿ! ನಮ್ಮ ಸೈನಿಕರು ನಿದ್ರೆಯಲ್ಲಿರುವಾಗ ಆಕ್ರಮಣ ಮಾಡಿ ಕೊಂದ ಕಚಡಾ ಪಾಕಿಸ್ತಾನಿಯರ ಮೇಲೆ ಯುದ್ದ ಸಾರಲಿ ಎಂದೇ ಪ್ರತಿಯೊಬ್ಬ ದೇಶಭಕ್ತ ಭಾರತೀಯನ ನಿಲುವಾಗಿತ್ತು. ಇತ್ತ ಗಡಿಯಲ್ಲಿ ಶೆಲ್ ದಾಳಿ ಹೆಚ್ಚುತ್ತಿರುವ ಸುದ್ದಿ ಪ್ರತಿ ದಿನ ಪತ್ರಿಕೆಗಳಲ್ಲಿ. ಉರಿ ದಾಳಿಯಲ್ಲಿ ಹುತಾತ್ಮರಾದ M N ರಾಯ್ ರವರ 11ವರ್ಷದ ಮಗಳು ತಂದೆಯ ಪಾರ್ಥೀವ ಶರೀರದೆದುರು ನಿಂತು ತಂದೆಯಿದ್ದ ಗೂರ್ಖಾ ರೆಜಿಮೆಂಟಿನ ‘ವಾರ್ ಕ್ರೈ’ ಕೂಗಿದಾಗಲಂತೂ ಕಣ್ಣಂಚು ಒದ್ದೆಯಾಗುತ್ತಿದ್ದರೂ ಯುದ್ದೋನ್ಮಾದ ತಲೆ ಎತ್ತಿತ್ತು. ಯುದ್ದವಾಗುತ್ತದೆ ಎಂದು ಕಾಯುತ್ತಿದ್ದ ಭಾರತೀಯನಿಗೆ ಅದಕ್ಕಿಂತಲೂ ಖುಷಿಯ ಸಮಾಚಾರ ತಲುಪಿತ್ತು. ಹೃದಯ ಹೆಮ್ಮೆಯಿಂದ ಅರಳಿತ್ತು! ಪಾಪಿ ಪಾಕಿಗೆ ಮರ್ಮಾಘಾತ. yes ಸರ್ಜಿಕಲ್ ಸ್ಟ್ರೈಕ್ …

ನಾವೂ ಏನನ್ನೂ ಸಾಧಿಸಬಲ್ಲೆವು ಎಂಬ ವಿಶ್ವಾಸ ತುಂಬಿಸಿದ ಅದೇ ಪಾಕಿಸ್ತಾನದ ಮೇಲಿನ ಸರ್ಜಿಕಲ್ ಸ್ಟ್ರೈಕ್ ಹಿನ್ನೆಲೆಯಾಗಿಟ್ಟುಕೊಂಡು ಮೂಡಿ ಬಂದ ಚಲನಚಿತ್ರ URI.
ನಾನು ಸಿನಿಮಾದ ವಿಮರ್ಶೆ ಬರೆಯಲು ಕುಳಿತಿಲ್ಲ. ಆದರೆ ಅದೊಂದು ಸಿನಿಮಾ ನನಗೆ ಮ್ಯೂನಿಚ್ ನೆನಪು ತರಿಸಿತು. ಅದೊಂದು ಸಿನಿಮಾ ನನಗೆ ಬಿಹೈಂಡ್ ದಿ ಎನಿಮಿ ಲೈನ್ಸ್ ಕಣ್ಣೆದುರು ತರಿಸಿತು. ಏನೂ ಮಾತಾಡದೆ ಯಾವ ವಿಮರ್ಶೆಯನ್ನೂ ನೋಡದೆ ಹೋಗಿ ಉರಿ ಸಿನಿಮಾ ನೋಡಿಬನ್ನಿ.ಈ ಯುದ್ದದ ಹಿನ್ನೆಲೆಯ ಸಿನಿಮಾ ರಾಷ್ಟ್ರವನ್ನ ಪ್ರೀತಿಸುವ ಪ್ರತಿಯೊಬ್ಬನ ಕಣ್ಣಲ್ಲಿ ಕಣ್ಣೀರು ಎದೆಯಲ್ಲಿ ಹೆಮ್ಮೆ ಮೂಡಿಸದಿದ್ದರೆ ಕೇಳಿ. How is the Josh? ಎಂದಾಗ ನೀವು High Sir ಎನ್ನದಿದ್ದರೆ ಕೇಳಿ. ಪಾತ್ರಗಳ ಹೆಸರು ಬದಲಾಯಿಸಿರುವುದು ನೈಜವಾಗಿ ಪಾಲ್ಗೋಂಡವರ ಸೇಫ್ಟಿಯ ದೃಷ್ಠಿಯಿಂದ ಆದರೂ ಅದರಲ್ಲಿ ಕೆಲವರು ಯಾರು ಎಂದು ನೋಡಿದ ತಕ್ಷಣ ಗೊತ್ತಾಗತ್ತೆ. ಸಿನಿಮಾಗೆ ಬೇಕಾದ ಮಸಾಲೇ ಸೇರಿಸಿದ್ದಾರೆ ಬಿಡಿ ಅದೇನು ದೊಡ್ಡ ವಿಚಾರವಲ್ಲ. ಆದರೆ ನಮಗೆ ಗೊತ್ತಿರದ ಹತ್ತು ಹಲವು ಸಂಗತಿಗಳನ್ನ ಸಿನಿಮಾ ಬಿಚ್ಚಿಡುತ್ತಾ ಹೋಗತ್ತೆ. ಪ್ರತಿಯೊಂದು ಸನ್ನಿವೇಶವೂ ನಮ್ಮ ಬಗ್ಗೆ ನಮಗೇ ಹೆಮ್ಮೆ ಮೂಡಿಸುತ್ತಾ ಹೋಗತ್ತೆ. ವ್ಹಾವ್ ಎಂತಹ ಬಲಿಷ್ಠ ಕೈಗಳಲ್ಲಿ ಭಾರತ ಸೇಫಾಗಿ ಇದೆ ಎನ್ನುವ ನೆಮ್ಮದಿ ಮೂಡಿಸತ್ತೆ. ನೆನಪಿರಲಿ ಈ ಸರ್ಜಿಕಲ್ ಸ್ಟ್ರೈಕ್ ನಂತರ ಭಾರತದಲ್ಲಿ ಯಾವ ಭಯೋತ್ಪಾದಕ ದಾಳಿಯ ಪ್ರಯತ್ನವೂ ಯಶಸ್ವಿಯಾಗಿಲ್ಲ!. ಯಾವ್ಯಾವುದೋ ಸಿನಿಮಾ ನೋಡಿ ಸಮಯ ವ್ಯರ್ಥ ಮಾಡಿಕೊಳ್ಳುವುದಕ್ಕಿಂತ ವರ್ತ್ ಎನಿಸುವ Uri ನೋಡಿ.

-ಅರವಿಂದ್ ಕೋಟೇಶ್ವರ್

Leave a Comment