ಸಾಲಿಗ್ರಾಮ ಪಟ್ಟಣ ಪಂಚಾಯತ್: ಅಧ್ಯಕ್ಷ ಉಪಾಧ್ಯಕ್ಷ ಪಟ್ಟ ಯಾರಿಗೆ..??

ಸಾಲಿಗ್ರಾಮ: ಸೆಪ್ಟೆಂಬರ್ ತಿಂಗಳು ಮೊದಲ ವಾರದಲ್ಲಿ ಫಲಿತಾಂಶ ಘೋಷಣೆ ಯಾಗಿದ್ದ ಸ್ಥಳಿಯಾಡಳಿತ ಸಂಸ್ಥೆಗಳಲ್ಲಿ ಇದುವರೆಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳು ಆಯ್ಕೆಯಾಗದೇ ಆಡಳಿತ ಯಂತ್ರ ಸಂಪೂರ್ಣ ಕುಸಿದು ಹೋಗಿತ್ತು, ಹೈಕೋರ್ಟ್ ಮೆಟ್ಟಿಲೇರಿದ ಮೀಸಲಾತಿ ಕೇಸಿಗೆ ಮೊನ್ನೆ ಶುಕ್ರವಾರ ದಿನ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು ಫಲಿತಾಂಶದ ದಿವಸ ಘೋಷಣೆ ಯಾಗಿದ್ದ ಮೀಸಲಾತಿಯನ್ನೆ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ.ಉಡುಪಿ ಜಿಲ್ಲೆಯ ಏಕೈಕ ಪಟ್ಟಣ ಪಂಚಾಯತ್ ಆಗಿರುವ ಸಾಲಿಗ್ರಾಮ ಪಟ್ಟಣ ಪಂಚಾಯತಿನಲ್ಲಿ ತೀರ್ಪು ಹೊರಬೀಳುತ್ತಿದ್ದಂತೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕಾಗಿ ಗರಿಗೆದರಿದ ಚಟುವಟಿಕೆಗಳು ಆರಂಭವಾಗಿವೆ..
ಎರಡೂ ಸ್ಥಾನಗಳಿಗೆ ಸಾಮಾನ್ಯ ಮಹಿಳೆ ಮೀಸಲಾತಿಯಿದ್ದು ಬಿಜೆಪಿಯಿಂದ ಐವರು ,ಕಾಂಗ್ರೇಸಿನಿಂದ ಒಂದು ಹಾಗೂ ಪಕ್ಷೇತರ ಒಂದು ಮಹಿಳೆ ಈಭಾರಿ ಪಟ್ಟಣಪಂಚಾಯತ್ ಗೆ ಆಯ್ಕೆಯಾಗಿದ್ದಾರೆ, ಸಂಖ್ಯಾ ಬಲ ಇಲ್ಲದೇ ಇರುವ ಕಾಂಗ್ರೇಸಿನಿಂದ ಹಾಗೂ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗುವ ಚಾನ್ಸು ಕಡಿಮೆ ಇದ್ದು, ಬಿಜೆಪಿಯ ಐವರಲ್ಲಿ ಅದ್ಯಕ್ಷ ಉಪಾದ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯಲಿದೆ, ಎರಡನೇ ಭಾರಿ ಆಯ್ಕೆಯಾಗಿ,ಹೋದ ಭಾರಿ ಉಪಾದ್ಯಕ್ಷೆಯಾಗಿದ್ದ ದೊಡ್ಮನೆಬೆಟ್ಟು ವಾರ್ಡಿನ ಸುಲತಾಹೆಗ್ಡೆ ಹಾಗೂ ವಿಷ್ಣುಮೂರ್ತಿ ವಾರ್ಡಿನಲ್ಲಿ ಹೈ ಲೀಡು ಪಡೆದು ಗೆದ್ದಿದ್ದ ಅನಸೂಯಾ ಹೇರ್ಳೆ ಅಧ್ಯಕ್ಷ ಸ್ಥಾನಕ್ಕೆ ರೇಸಿನಲ್ಲಿದ್ದಾರೆ, ಉಳಿದಂತೆ ಪಡುಕರೆ ವಾರ್ಡ್‌ನ ರೇಖಾ ಕೇಶವ್, ತೆಂಕುಹೋಳಿ ವಾರ್ಡ್‌ನ ಗಿರೀಜಾ ಪೂಜಾರ್ತಿ,ಮಾರಿಗುಡಿಯ ಸುಕನ್ಯಾಶೆಟ್ಟಿ ಕೂಡ ಮೀಸಲಾತಿಯ ಲಾಭ ಪಡೆಯುವ ಚಾನ್ಸು ಇಲ್ಲದಿಲ್ಲ.. ಸದ್ಯ ಸರಕಾರದ ನೋಟಿಪಿಕೇಷನ್ ಬರಲು ಬಾಕಿ ಇದ್ದು, ಆದಷ್ಟು ಬೇಗ ಸ್ಥಳಿಯಾಡಳಿತದ ಆಡಳಿತ ಯಂತ್ರ ಚಾಲನೆಗಳ್ಳಲಿ ಎನ್ನುವುದು ನಿಮ್ಮ ಅಭಿಮತದ ಹಾರೈಕೆ.

ನಿಮ್ಮ ಅಭಿಮತ ನ್ಯೂಸ್ ಬ್ಯೂರೊ.

One Thought to “ಸಾಲಿಗ್ರಾಮ ಪಟ್ಟಣ ಪಂಚಾಯತ್: ಅಧ್ಯಕ್ಷ ಉಪಾಧ್ಯಕ್ಷ ಪಟ್ಟ ಯಾರಿಗೆ..??”

  1. Chandrashekhar

    ಯಾರೇ ಬಂದರು, ಜನರ ಹಣೆಬರಹ ಬದಲಾಗಲ್ಲಾ

Leave a Comment