ಯಡಮೊಗೆ ಹೆಣ್ಣುಮಗುವಿನ ಕಿಡ್ನಾಪ್ ಪ್ರಕರಣ: ಎತ್ತ ಹೊ ರಳಲಿದೆ ತನಿಖೆಯ ದಿಕ್ಕು..??

ಶಂಕರನಾರಾಯಣ: ರಾಜ್ಯ ರಾಜಕಾರಣದಲ್ಲಿ ರಾಜೀನಾಮೆ ಪರ್ವ ಆರಂಭಗೊಂಡಿರುವ ಈ ಹೊತ್ತಿನಲ್ಲಿ ಪೂರ್ತಿ ರಾಜ್ಯದ ನಜರು ಅತ್ತ ನೆಟ್ಟಿರಬೇಕಾದರೆ,ಇತ್ತ ಸಿದ್ದಾಪುರ ಯಡಮೊಗೆಯ ಒಂದುಕಾಲು ವರುಷದ ಹೆಣ್ಣುಮಗುವಿನ ಕಿಡ್ನಾಪ್ ಪ್ರಕರಣ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ,
ರಾತ್ರಿ ಮನೆಗೆ ನುಗ್ಗಿ ಆಗುಂತಕನೊಬ್ಬ ಮಗುವನ್ನು ಹೊತ್ತೊಯ್ದ ಎನ್ನುತ್ತಿರುವ ತಾಯಿಯ ಮಾತಿನಲ್ಲಿ ಸತ್ಯಾಂಶವಿದೆಯಾ?? ಚಿಲಕ ಹಾಕಿದ್ದ ಮನೆಯೊಳಗೆ ಆಗುಂತಕ ಒಳಪ್ರವೇಶಿಸಿದ್ದು ಹೇಗೆ??
ಮಕ್ಕಳನ್ನು ಕಟ್ಟಿಕೊಂಡು ಆತ್ಮಹತ್ಯೆಗೆ ಏನಾದರೂ ಪ್ರಯತ್ನಿಸಿದಳೆ ಆ ಮಹಾತಾಯಿ?? ಬೂದು ಬಣ್ಣದ ಶರ್ಟು ದರಿಸಿದವ ಹೊಳೆಗೆ ಹಾರಿದ ಎನ್ನುವುದೆಲ್ಲಾ ತಪ್ಪಿಸಿಕೊಳ್ಳಲು ಹೆಣೆದಿರುವ ಕಥೆಯಾ??
ಈ ಮಗು ಅಪಹರಣ ಪ್ರಕರಣದ ಸುತ್ತ ಇಂತವೇ ಅನುಮಾನದ ಪ್ರಶ್ನೆಗಳು ಮೂಡುತ್ತವಾದರೂ, ಆ ಒಂದುಕಾಲು ವರುಷದ ಹೆಣ್ಣು ಮಗು ಸುರಕ್ಷಿತವಾಗಿ ಮರಳಿ ಬರಲಿ ಎಂದು ಜಿಲ್ಲೆಯ ಜನ ಒಕ್ಕೊರಲಿನಿಂದ ಪ್ರಾರ್ಥಿಸುತ್ತಿದೆ, ಪೋಲಿಸರು ಆ ದಿಕ್ಕಿನಲ್ಲೆ ತನಿಖೆ ನಡೆಸುತ್ತಿದ್ದು,ಸಂಜೆ ವೇಳೆಗೆ ಎಸ್ಪಿ ನಿಶಾ ಜೇಮ್ಸ್ ಪತ್ರಿಕಾಗೋಷ್ಠಿ ಕರೆಯುವ ಸಂಬವಿದೆ ಎನ್ನಲಾಗುತ್ತಿದೆ, ಹೆಚ್ಚಿನ ವಿವರ ಇನ್ನೇನು ಹೊರಬರಬೇಕಿದೆ.

ಅಭಿಮತ ನ್ಯೂಸ್ ಬ್ಯೂರೋ.

Leave a Comment