ಸಂಸ್ಕೃತಿ ಉಳಿಸುವ ಪಣತೊಟ್ಟವನಿಂದ ಯಕ್ಷಗಾನಕ್ಕೆ ಅವಮಾನ!

ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸುತ್ತಿರುವ ಕಲೆಗಳಲ್ಲಿ ಯಕ್ಷಗಾನ ಕಲೆ ಪ್ರಮುಖವಾದುದು.
ಅಂತಹ ಯಕ್ಷಗಾನ ಜಲವಳ್ಳಿ ಮೇಳದವರಿಂದ ಯಲ್ಲಾಪುರದ ಎಲ್.ಎಸ್.ಎಮ್.ಪಿ ಆವಾರದಲ್ಲಿ ದಿನಾಂಕ 21-01-2019 ರಂದು ನಡೆಯುತ್ತಿರುವಾಗ ರಾತ್ರಿ ಸುಮಾರು 12.30 ರ ಹೊತ್ತಿಗೆ ಒಬ್ಬರು ಬಂದು ಮೈಕ್ ನವನ ಬಳಿ ಯಾರು ನಿಮ್ಮ ಮೇನೆಜರ್ ಎಂದು ಗದುರಿಸಿದಾಗ ಮೈಕ್ ಉಸ್ತುವಾರಿಯಾತ ಒಳಗಡೆಯಿರಬಹುದು ನೋಡಿ ಎಂದಿದ್ದಾನೆ. ತಕ್ಷಣ ಚೌಕಿಮನೆಯನ್ನು (ಬಣ್ಣದ ಕೊಣೆಯನ್ನು) ಪ್ರವೇಶಿ ಅಲ್ಲಿರುವ ಕಲಾವಿದರ ಬಳಿಯೂ ಏರು ಸ್ವರದಲ್ಲಿ “ಯಾರು ನಿಮ್ಮ ಮೇನೆಜರ್, ಎಲ್ಲಿದ್ದಾನವನು, ಅದೇನು ಆರೀತಿಯಲ್ಲಿ ಮೈಕ್ ಅಳವಡಿಸಿದ್ದೀರಿ ,ನಮ್ಮ ಮನೆಯಲ್ಲಿ ನಿಮ್ಮ ಮೈಕ್ ಶಬ್ದದಿಂದಾಗಿ ಮಲಗಲು ಆಗುತ್ತಿಲ್ಲ” ಎಂದು ಗಲಾಟೆ ಮಾಡಿದ್ದಾರೆ.ಅದನ್ನು ಕೇಳಿದ ಮೇಳದ ಯಜಮಾನರು ಆಯ್ತು ಸ್ವಾಮಿ ನಿಮ್ಮ ಮನೆಕಡೆ ಶಬ್ದಬರುವ ಧ್ವನಿವರ್ಧಕವನ್ನು ನಿಷ್ಕ್ರಿಯಗೊಳಿಸುವುದಾಗಿ ಹೇಳಿ ಮೈಕ್ ನವನಿಗೆ ಅದನ್ನು ನಿಷ್ಕ್ರಿಯಗೊಳಿಸಲು ಹೇಳಿದ್ದಾರೆ.ಅಲ್ಲಿಂದ ಗೊಣಗುತ್ತಾ ರಂಗಸ್ಥಳದ ಹಿಂಭಾಗಕ್ಕೆ ಬಂದ ಅವರಲ್ಲಿ ಯಕ್ಷಗಾನ ಅಭಿಮಾನಿಯೊಬ್ಬರು ಯಾಕೆ ಸುಮ್ಮನೆ ಸಿಟ್ಟಾಗುತ್ತೀರ ಎಂದು ಕೇಳಿದಾಗ ” ರೀ ಮಿಸ್ಟರ್ ನನಗೂ ಗೊತ್ತಿದೆ ಏನ್ಮಾಡ್ಬೇಕಂತ,ನಾನು ಯಾರಂತ ಗೊತ್ತಲ್ಲ.ಮನೆಗೆ ಹೋಗಿ ನೋಡ್ತೇನೆ ಮತ್ತೆ ಶಬ್ದ ಕೇಳಿಸಿದರೆ ಆಮೇಲೆ ಬಂದು ಮಾಡ್ತೇನೆ ನಿಮಗೆ” ಎಂದು ಯಕ್ಷಗಾನವನ್ನು ಕೆಲ ನಿಮಿಷ ನಿಲ್ಲಿಸುವ ಮಟ್ಟಿಗೆ ಬೊಬ್ಬೆ ಹಾಕಿದ್ದಾರೆ.
ಈ ರೀತಿಯಲ್ಲಿ ಯಕ್ಷಗಾನ ನಡೆಯುವಲ್ಲಿ ಬಂದು ಮೇಳದವರ ಎದುರು ಅಗೌರವದಿಂದ ವರ್ತಿಸಿದವರು ಸಾಮಾನ್ಯ ವ್ಯಕ್ತಿಯಲ್ಲ. ಅವರು ಯಲ್ಲಾಪುರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು.


ಕನ್ನಡದ ಮೇರು ಕಲೆಯಾದ ಯಕ್ಷಗಾನವನ್ನೇ ಗೌರವಿಸದಿರುವ ಅವರು ಯಲ್ಲಾಪುರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರುವುದು ಅವರ ಸೌಭಾಗ್ಯವೋ? ಅಥವಾ ಕನ್ನಡ ಸಾಹಿತ್ಯ ಪರಿಷತ್ತಿನ ದೌರ್ಭಾಗ್ಯವೋ? ಎಂಬುದು ಯಲ್ಲಾಪುರದ ಯಕ್ಷಾಭಿಮಾನಿಗಳಾದ ನಮ್ಮಂತವರ ಪ್ರಶ್ನೆ!!.

Leave a Comment