ಎಲ್ಲಿಯೂ ನಿಲ್ಲದ ಒಂಟಿ ಯಾತ್ರಿಕ ನಾನು

ನನ್ನ ಕೆಂಡ ಸಂಪಿಗೆಯೇ
ನಿನ್ನ ಪ್ರೀತಿಯ ಯಾಚಿಸಿ, ಹಂಬಲಿಸಿ
ದುಂಬಾಲು ಬಿದ್ದು ಹಪಹಪಿಸಿ
ಕೊನೆಗೂ ಧಕ್ಕಿಸಿಕೊಂಡು
ಅಹಂಕಾರದಲ್ಲಿ ಎದೆಯುಬ್ಬಿಸಿ
ಕನಸಿನ ಕೋಟೆ ಕಟ್ಟಿ
ಒಲವ ಗಾನದ ಯಾನಿಯಾಗಿ
ಇದೀಗ ವಿದಾಯದ ಕವಿತೆ ಬರೆಯುತ್ತಿರುವೆ

Leave a Comment